ಬೇಲೂರು : ಪಟ್ಟಣದ ಹಳೇ ಪೋಸ್ಟ್ ಆಫೀಸ್ ರಸ್ತೆಯಲ್ಲಿರುವ ಭಾವಸಾರ ಕ್ಷತ್ರಿಯ ಸಮಾಜದ ಶ್ರೀ ರುಕ್ಮಿಣಿ ಪಾಂಡುರಂಗಸ್ವಾಮಿ
ದೇವಾಲಯದಲ್ಲಿ 40ನೇ ವರ್ಷದ ದಿಂಡಿ ಮಹೋತ್ಸವವು ನೂರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ವಿಜೃಂಭಣೆಯಿಂದ ನೆರವೇರಿತು.
ಶ್ರೀ ರುಕ್ಮಿಣಿ ಪಾಂಡುರಂಗಸ್ವಾಮಿ ದಿಂಡಿ ಮಹೋತ್ಸವದ ಅಂಗವಾಗಿ ಶ್ರೀ ರುಕ್ಮಿಣಿ ಪಾಂಡುರಂಗ ಸ್ವಾಮಿಗೆ ಅಭಿಷೇಕ, ಪುಷ್ಪಾರ್ಚನೆ, ವಿಶೇಷ ಮಹಾಮಂಗಳಾರತಿ ಮತ್ತು ಶ್ರೀ ಸಂತ ಸಾಮ್ರಾಟ ಜ್ಞಾನದೇವ ರಚಿತ ಶ್ರೀ ಜ್ಞಾನೇಶ್ವರಿ ಗ್ರಂಥ ಬೋಧನೆ, ಭದ್ರಾವತಿಯ ಚಂದ್ರಶೇಖರ್ ಉತ್ತರ್ಕರ್‌ರಿಂದ ಪ್ರವಚನ ಮತ್ತು ಯೋಗೇಶ್ ಕುಮಾರ್ ಇರಾಸ್ಕರ್‌ರಿಂದ ಕೀರ್ತನೆ, ಸಾಗರದ ಶಿವಶಂಕರ್ ಡೊಯಿಜೋಡೆಯವರಿಂದ ಅಖಂಡ ಜಾಗರಣೆ ಮತ್ತು ಭಜನೆ, ಪ್ರವಚನ ನಡೆಸಲಾಯಿತು. ನಂತರ ಶ್ರೀ ರುಕ್ಮಿಣಿ ಪಾಂಡುರಂಗ ಸ್ವಾಮಿಗೆ ಅದ್ದೂರಿಯಾಗಿ ಬೆಳ್ಳಿ ರಥದ ಮೇಲಿರಿಸಿ ಪಟ್ಟಣದ ರಾಜಬೀದಿಯಲ್ಲಿ ಉತ್ಸವ ನಡೆಸಿ ಮಧ್ಯಾಹ್ನ ಕಾಲಾ ಕೀರ್ತನೆಯೊಂದಿಗೆ ಅನ್ನಸಂತರ್ಪಣೆ ಮಾಡಲಾಯಿತು.
ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಭಗವಂತ ರಾವ್ ಗುಜ್ಜರ್ ಮಾತನಾಡಿದರು.
ಬೇಲೂರು ಭಾವಸಾರ ಕ್ಷತ್ರಿಯ ಸಮಾಜದ ಪರಿಣಿತರಿಂದ ವಿಶೇಷ ಭಜನೆ ಹಾಗೂ ಎಸ್‌ಎಸ್‌ಎ
ಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಸಮಾಜದ ಮಕ್ಕಳಿಗೆ ಅನಂತಲಕ್ಷ್ಮೀ ಕುಟುಂಬದವರಿಂದ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಭಾವಸಾರ ಕ್ಷತ್ರಿಯ ಸಮಾಜದ ಗೌರವಾಧ್ಯಕ್ಷ ಆನಂದ್ ಚಿಂಬಾಳ್ಕಕರ್, ಉಪಾಧ್ಯಕ್ಷ ಮಂಜುನಾಥ್ ಇರಾಸ್ಕರ್, ಕಾರ್ಯದರ್ಶಿ ಗಣೇಶ್ ಪೊಕಾಳೆ, ಖಜಾಂಚಿ ಗಣೇಶ್, ಮಾಜಿ ಅಧ್ಯಕ್ಷರಾದ ಬಾಬುರಾವ್, ಕೃಷ್ಣಮೂರ್ತಿ, ಮುಖಂಡ ಜಯಣ್ಣ, ದೀಪಕ್, ಸಾಹಿತಿ ಕಿರಣ್ ಗುಜರ್, ಕಾರ್ತಿಕ್, ಕೌಶಿಕ್, ರಂಜಿತ್ ಇತರರಿದ್ದರು.