ಕೆರೆಗಳಿಗೆ ನದಿ ನೀರು ಹರಿಸುವ ಯೋಜನೆ ರೂಪಿಸಿ

 ಮುಳ್ಳುಕೆರೆ ಗ್ರಾಮದ ಭೈರವೇಶ್ವರಸ್ವಾಮಿ ದೇಗುಲದ ಮುಂಭಾಗ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿದರು. ವಾಸು, ನಾಗರಾಜು, ಸುರೇಶ್, ಚೇತನ್, ಮಹೇಶ್ ಬಾಬು, ಗಿರೀಶ್, ಸಂಪತ್‌ಕುಮಾರ್, ರವಿ ಇದ್ದರು.
ಮುಳ್ಳುಕೆರೆ ಗ್ರಾಮದ ಭೈರವೇಶ್ವರಸ್ವಾಮಿ ದೇಗುಲದ ಮುಂಭಾಗ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿದರು. ವಾಸು, ನಾಗರಾಜು, ಸುರೇಶ್, ಚೇತನ್, ಮಹೇಶ್ ಬಾಬು, ಗಿರೀಶ್, ಸಂಪತ್‌ಕುಮಾರ್, ರವಿ ಇದ್ದರು.
Published on

ನುಗ್ಗೇಹಳ್ಳಿ: ಮುಳ್ಳುಕೆರೆ ಹಾಗೂ ನೇರಲಕೆರೆ ಗ್ರಾಮದ ಕೆರೆಗಳಿಗೆ ಹೇಮಾವತಿ ನದಿ ನೀರು ಹರಿಸುವ ಯೋಜನೆ ರೂಪಿಸುವಂತೆ ಇಂಜಿನಿಯರ್‌ಗಳಿಗೆ ಸೂಚನೆ ನೀಡುವುದಾಗಿ ಶಾಸಕ ಸಿ.ಎನ್. ಬಾಲಕೃಷ್ಣ ಸೂಚನೆ ನೀಡಿದರು.

ಹೋಬಳಿಯ ಮುಳ್ಳುಕೆರೆ ಗ್ರಾಮದ ಭೈರವೇಶ್ವರ ಸ್ವಾಮಿ ದೇಗುಲದ ಮುಂಭಾಗ ಭಾನುವಾರ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಮಾತನಾಡಿದರು.
ಕೆರೆಗಳ ಪುನಶ್ಚೇತನಗೊಂಡು ನೀರು ಸಂಗ್ರಹವಾಗಿದ್ದರೆ ಭೂಮಿಯಲ್ಲಿ ಅಂತರ್ಜಲ ಇರುತ್ತದೆ. ಮುಂಗಾರು, ಹಿಂಗಾರು ಮಳೆ ಕೈಕೊಟ್ಟ ಸಂದರ್ಭಗಳಲ್ಲಿ ಜನ-ಜಾನುವಾರುಗಳ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕೊಳವೆ ಬಾವಿಗಳಲ್ಲಿ ನೀರುವ ಸಿಗುತ್ತದೆ. ಇವು ಬತ್ತಿ ಹೋಗದಂತೆ ಮುಂಜಾಗ್ರತೆಗಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಂ.ಆರ್. ವಾಸು, ಟಿಎಪಿಸಿಎಂಎಸ್ ನಿರ್ದೇಶಕ ತೋಟಿ ನಾಗರಾಜ್, ಮುಖಂಡರಾದ ನೇರಲಕೆರೆ ಇಂದ್ರಜಿತ್, ಜೇ ಮಾವಿನಹಳ್ಳಿ ಸುರೇಶ್, ಸಂಪತ್ ಕುಮಾರ್, ಚೇತನ್, ಮಹೇಶ್ ಬಾಬು, ಎಂ.ಜಿ.ಗಿರೀಶ್, ಶಂಕರೇಗೌಡ, ಜಗದೀಶ್, ತಿಮ್ಮೇಗೌಡ, ಬಸವಯ್ಯ, ರವಿ, ಅಶೋಕ್, ಅಣ್ಣಯ್ಯ, ಲಿಂಗರಾಜ್, ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net