ಹಾಸನ: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಪತ್ನಿ ಚೆನ್ನಮ್ಮ ಸಮಾಧಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಕೆಲಕಾಲ ಭಾವುಕರಾದರು.
ಬೆಂಗಳೂರಿನಿಂದ ಆಗಮಿಸಿದ ಗೌಡರು ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ರಂಗನಾಥಸ್ವಾಮಿ ತಪ್ಪಲಿನಲ್ಲಿರುವ ಸಮಾಧಿ ಸ್ಥಳಕ್ಕೆ ತೆರಳಿ ಪತ್ನಿ ಜತೆಗಿನ ಒಟನಾಟ ನೆನೆದು ಕಣ್ಣೀರು ಹಾಕಿದರು.
ಮನೆಗೆ ಬರುತ್ತಿದ್ದವರನ್ನು ಪ್ರೀತಿಯಿಂದ ಕಂಡು, ಊಟ ಉಪಚಾರ ಮಾಡುತ್ತಿದ್ದರು. ಬಂದಿದ್ದವರ ಕೆಲಸದ ಬಗ್ಗೆ ನನ್ನ ಬಳಿ ಹೇಳಿ ನನ್ನಿಂದ ಕೆಲಸ ಮಾಡಿಸುತ್ತಿದ್ದರು ಎಂದು ದೇವೇಗೌಡರು ಸ್ಮರಿಸಿದರು.
ಚೆನ್ನಮ್ಮ ಕೊನೆಯ ಕ್ಷಣಕ್ಕೆ ಲಕ್ಷಾಂತರ ಜನ ಸಾಕ್ಷಿಯಾಗಿದರು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ರಾಜ್ಯ ಮತ್ತು ಕೇಂದ್ರ ಸಚಿವರು, ಅನೇಕ ಗಣ್ಯರು ನಮ್ಮ ಕುಟುಂಬದ ದುಃಖದ ಸಮಯದಲ್ಲಿ ಸ್ಪಂದಿಸಿದ್ದಾರೆ. ಅವರೆಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆಂದ ಗೌಡರು ಕಣ್ಣೀರಾದರು.