ಕೆರೆ, ಗೋಮಾಳ ಸಂರಕ್ಷಣೆಗೆ ಒತ್ತಾಯ

ಒಂಟಿ ಮಾವಿನಹಳ್ಳಿ ಗ್ರಾಮದ ಕೆರೆ ಹಾಗೂ ಗೋಮಾಳದ ಭೂಮಿಯನ್ನು ಸರ್ವೇ ಮಾಡಿಸಿ ರಕ್ಷಿಸಬೇಕು ಎಂದು ಗ್ರಾಮಸ್ಥರು ಅಧಿಕಾರಿಗಳನ್ನು ಒತ್ತಾಯಿಸಿದರು. ಜಯರಾಮ್, ಸತೀಶ್, ವೆಂಕಟೇಶ್, ನಾರಾಯಣ, ಜಯರಂಗಶೆಟ್ಟಿ, ಗಿರಿ ಗೌಡ, ಇದ್ದರು.
ಒಂಟಿ ಮಾವಿನಹಳ್ಳಿ ಗ್ರಾಮದ ಕೆರೆ ಹಾಗೂ ಗೋಮಾಳದ ಭೂಮಿಯನ್ನು ಸರ್ವೇ ಮಾಡಿಸಿ ರಕ್ಷಿಸಬೇಕು ಎಂದು ಗ್ರಾಮಸ್ಥರು ಅಧಿಕಾರಿಗಳನ್ನು ಒತ್ತಾಯಿಸಿದರು. ಜಯರಾಮ್, ಸತೀಶ್, ವೆಂಕಟೇಶ್, ನಾರಾಯಣ, ಜಯರಂಗಶೆಟ್ಟಿ, ಗಿರಿ ಗೌಡ, ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • lakes and pastures
ನುಗ್ಗೇಹಳ್ಳಿ: ಹೋಬಳಿಯ ಒಂಟಿ ಮಾವಿನಹಳ್ಳಿ ಗ್ರಾಮದ ತುರುವನಕೆರೆ ಹಾಗೂ ಸುತ್ತಲಿನ 110 ಎಕರೆ ಗೋಮಾಳ ಒತ್ತುವರಿ ತೆರವು ಮಾಡಬೇಕು. ಅಧಿಕಾರಿಗಳು ಕೂಡಲೇ ಸರ್ವೇ ಕಾರ್ಯ ನಡೆಸಿ ಕೆರೆ ಮುತ್ತು ಸುತ್ತಲಿನ ಜಾಗವನ್ನು ರಕ್ಷಣೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಸಂಬಂಧ ಗ್ರಾಮದ ಮುಖಂಡ ಜಯರಾಮ್ ಮಾತನಾಡಿ, ಕೆರೆ ಮತ್ತು ಗೋಮಾಳವನ್ನು ನಮ್ಮ ಪೂರ್ವಿಕರು ಅವಲಂಬಿಸಿದ್ದರು. 110 ಎಕರೆ ಇದ್ದ ಗೋಮಾಳದ ಸ್ವಲ್ಪ ಭಾಗ ಕೆಲವರಿಗೆ ಹಂಚಿಕೆಯಾಗಿದೆ. ಉಳಿದ ಭೂಮಿಯ ಸರ್ವೇ ಕಾರ್ಯ ಮಾಡಿ ಅದನ್ನು ಉಳಿಸಬೇಕಿದೆ. ಇದರಿಂದ ಗ್ರಾಮದ ದನಕರುಗಳ ಸಾಕಣೆಗೆ ಅನುಕೂಲ ಆಗಲಿದೆ. ಕೆರೆಯು ಒತ್ತುವರಿಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸರ್ವೇ ಕಾರ್ಯ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸತೀಶ್, ಸುರೇಶ್, ಜಯರಾಮ್ ಶೆಟ್ಟಿ, ರಂಗನಾಥ್, ನಾರಾಯಣ್, ವೆಂಕಟೇಶ್, ಧರ್ಮಪಾಲ, ಮಂಜುನಾಥ್, ಚೇತನ್, ಗಿರಿಗೌಡ, ಧರಣಿ, ಪಾಂಡು, ಇತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net