ನಾಲ್ಕು ಮೇಕೆ ಮರಿಗಳ ಸಾವು

ಅರಕಲಗೂಡು ತಾಲೂಕಿನ ನೈಗೆರೆ ಸಮೀಪ ಹೊಟ್ಟೆ ಉಬ್ಬಸ ಕಾಣಿಸಿಕೊಂಡು ಮೃತಪಟ್ಟಿರುವ ಮೇಕೆ ಮರಿಗಳ ಕಳೇಬರ.
ಅರಕಲಗೂಡು ತಾಲೂಕಿನ ನೈಗೆರೆ ಸಮೀಪ ಹೊಟ್ಟೆ ಉಬ್ಬಸ ಕಾಣಿಸಿಕೊಂಡು ಮೃತಪಟ್ಟಿರುವ ಮೇಕೆ ಮರಿಗಳ ಕಳೇಬರ.
Published on
ಅರಕಲಗೂಡು: ತಾಲೂಕಿನ ನೈಗೆರೆ ಸಮೀಪ ಶನಿವಾರ ಕುರಿಗಾಹಿಗಳು ಮೇಯಲು ಬಿಟ್ಟಿದ್ದ ನಾಲ್ಕು ಮೇಕೆ ಮರಿಗಳಿಗೆ ಹೊಟ್ಟೆ ಉಬ್ಬಸ ಕಾಣಿಸಿಕೊಂಡು ಅಸುನೀಗಿವೆ.
ಹುಳಿಯಾರು ಬಳಿಯ ದಸುಡಿ ಗ್ರಾಮದ ಕುರಿಗಾಹಿಗಳು ನೈಗೆರೆಕೊಪ್ಪಲು ಸಮೀಪ ಕೆರೆ ಬಳಿ ಮೇಯಲು ಬಿಟ್ಟಿದ್ದಾಗ ಮಂದೆಯಲ್ಲಿದ್ದ ನಾಲ್ಕು ಮೇಕೆ ಮರಿಗಳು ಹೊಟ್ಟೆ ಉಬ್ಬಸದಿಂದ ಒದ್ದಾಡಿ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಕುರಿಗಳು ಅಸ್ವಸ್ಥಗೊಂಡಿವೆ. ವಿಷಯ ತಿಳಿದ ಬೆಳವಾಡಿ ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಚಿರಂಜೀವಿ ಆಗಮಿಸಿ ಅಸ್ವಸ್ಥಗೊಂಡಿದ್ದ ಕುರಿಗಳಿಗೆ ಚಿಕಿತ್ಸೆ ನೀಡಿದರು. ಮಳೆ ಬಿದ್ದಿದ್ದರಿಂದ ಹಸಿರು ಮೇವು ತಿಂದು ಜೀರ್ಣಕ್ರಿಯೆ ಆಗದೆ ಹೊಟ್ಟೆ ಉಬ್ಬರದಿಂದ ಮೇಕೆ ಮರಿಗಳು ಮೃತಪಟ್ಟಿವೆ. ಅಸ್ವಸ್ಥಗೊಂಡಿದ್ದ ಇನ್ನುಳಿದ ಕುರಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಡಾ. ಚಿರಂಜೀವಿ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net