ತೆಂಗಿನ ಮರಗಳಿಗೆ ಹಾನಿ

ಸೋಂಪುರದಲ್ಲಿ ಕಾಡಾನೆಗಳ ದಾಳಿಗೆ ತೆಂಗಿನ ಸಸಿಗೆ ಹಾನಿಯಾಗಿರುವುದು.
ಸೋಂಪುರದಲ್ಲಿ ಕಾಡಾನೆಗಳ ದಾಳಿಗೆ ತೆಂಗಿನ ಸಸಿಗೆ ಹಾನಿಯಾಗಿರುವುದು.
Published on
ಅರಕಲಗೂಡು: ತಾಲೂಕಿನ ಮಲ್ಲಿಪಟ್ಟಣ ಹೋಬಳಿಯ ಸೋಂಪುರ ಗ್ರಾಮದಲ್ಲಿ ಶನಿವಾರ ರಾತ್ರಿ ಕಾಡಾನೆಗಳ ದಾಳಿಗೆ ರೈತ ರಂಜಿತ್ ಅವರ ಇಪ್ಪತ್ತಕ್ಕೂ ಹೆಚ್ಚು ತೆಂಗಿನ ಮರಗಳಿಗೆ ಹಾನಿಯಾಗಿದೆ.
ಆಹಾರ ಅರಸಿ ಬಂದ ಕಾಡಾನೆಗಳ ಹಿಂಡು ಜಮೀನಿಗೆ ನುಗ್ಗಿ ತೆಂಗಿನ ಮರಗಳನ್ನು ಸಿಗಿದು ಹಾಕಿವೆ. ಘಟನೆಯಿಂದಾಗಿ ರೈತ ರಂಜಿತ್ ಅವರಿಗೆ ನಷ್ಟ ಉಂಟಾಗಿದೆ. ಘಟನೆ ಬಳಿಕ ಗ್ರಾಮಸ್ಥರು ಮತ್ತು ರೈತರು ಸ್ಥಳಕ್ಕೆ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net