ಕಾಡು ಬೆಳೆಸುವುದು ಪುಣ್ಯದ ಕಾಯಕ

ಅರಕಲಗೂಡು ತಾಲೂಕಿನ ಮದಲಾಪುರ ಗ್ರಾಮದ ಗುಂಡುತೋಪಿನಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶುಕ್ರವಾರ ಸಸಿ ನೆಟ್ಟು ನೀರೆರೆದರು. ಎಂ.ಆರ್.ರಂಗಸ್ವಾಮಿ, ಜಯಸ್ವಾಮಿ, ಮಣಿಕಂಠ, ವಿಠಲ, ಮೋದಾಮಣಿ ಇದ್ದರು.
ಅರಕಲಗೂಡು ತಾಲೂಕಿನ ಮದಲಾಪುರ ಗ್ರಾಮದ ಗುಂಡುತೋಪಿನಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶುಕ್ರವಾರ ಸಸಿ ನೆಟ್ಟು ನೀರೆರೆದರು. ಎಂ.ಆರ್.ರಂಗಸ್ವಾಮಿ, ಜಯಸ್ವಾಮಿ, ಮಣಿಕಂಠ, ವಿಠಲ, ಮೋದಾಮಣಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಲ್ಲಿಪಟ್ಟಣ ಗ್ರಾಪಂ ಮಾಜಿ ಅಧ್ಯಕ್ಷ ಎಂ.ಆರ್.ರಂಗಸ್ವಾಮಿ ಅಭಿಪ್ರಾಯ
ಅರಕಲಗೂಡು: ಸಾಲುಮರದ ತಿಮ್ಮಕ್ಕ ಅವರ ಆಶಯದಂತೆ ಕಾಡು ಬೆಳೆಸುವುದು ಪುಣ್ಯದ ಕಾಯಕವಾಗಿದ್ದನ್ನು ಅರಿತು ಗುಂಡುತೋಪಿನಲ್ಲಿ ನೆಟ್ಟ ಕಾಡು ಜಾತಿಯ ಸಸಿಗಳು ಹಸಿರು ವನವಾಗಿ ಮಾರ್ಪಟ್ಟಿದೆ ಎಂದು ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಆರ್.ರಂಗಸ್ವಾಮಿ ಹೇಳಿದರು.
ತಾಲೂಕಿನ ಮದಲಾಪುರ ಗ್ರಾಮದ ಗುಂಡುತೋಪಿನಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶುಕ್ರವಾರ ಸಸಿ ನೆಟ್ಟು ಮಾತನಾಡಿ, ದಶಕದ ಹಿಂದೆ ಇಲ್ಲಿ ನೆಟ್ಟ ನೂರಾರು ಗಿಡಗಳು ಬೆಳೆದು ಪರಿಸರಕ್ಕೆ ಕೊಡುಗೆಯಾಗಿವೆ. ಖಾಲಿ ಉಳಿದಿರುವ ಜಾಗಕ್ಕೆ ಈಗ ಮತ್ತಷ್ಟು ಸಸಿಗಳನ್ನು ನೆಡಲಾಗುತ್ತಿದೆ ಎಂದು ತಿಳಿಸಿದರು.
ಪರಿಸರ ಸಂರಕ್ಷಣೆಗೆ ಒತ್ತು ನೀಡಿ ಪ್ರತಿಯೊಬ್ಬರೂ ಕನಿಷ್ಠ ಒಂದು ಸಸಿ ನೆಟ್ಟು ಅದರ ಪೋಷಣೆ ಮಾಡುವ ಮೂಲಕ ಪ್ರಕೃತಿಯ ಉಳಿವಿಗೆ ತಮ್ಮದೇ ಆದ ಕೊಡುಗೆ ನೀಡಬೇಕು. ಅರಣ್ಯ ನಾಶ, ಜಾಗತಿಕ ತಾಪಮಾನ ಏರಿಕೆ ಹಾಗೂ ಮಾಲಿನ್ಯದಿಂದ ಪರಿಸರ ಸಮತೋಲನ ಹದಗೆಡುತ್ತಿದ್ದು, ಮುಂದಿನ ಪೀಳಿಗೆಗೆ ಆರೋಗ್ಯಕರ ವಾತಾವರಣವನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಮರಗಳು ಮಾನವನ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಶುದ್ಧ ಗಾಳಿ, ಮಳೆ ಹಾಗೂ ಜೀವ ವೈವಿಧ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕಳೆದ ಹಲವು ವರ್ಷಗಳಿಂದ ತಾವು ನೆಟ್ಟ ವಿವಿಧ ಕಾಡು ಜಾತಿಯ ಮರಗಳು ಇಂದು ದಟ್ಟವಾಗಿ ಬೆಳೆದು ನಿಂತಿವೆ. ನಾವೆಲ್ಲ ಪ್ಲಾಸ್ಟಿಕ್ ಬಳಕೆಯನು ಕಡಿಮೆ ಮಾಡಿ, ನೀರಿನ ಸಂರಕ್ಷಣೆ, ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಪ್ರಕೃತಿಯನ್ನು ಉಳಿಸಬೇಕು. ಇದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದರು.
ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಜಯಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷ ಮಣಿಕಂಠ, ಸದಸ್ಯ ವಿಠಲ, ಅಂಗನವಾಡಿ ಶಿಕ್ಷಕಿ ಮೋದಾಮಣಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net