ಅಂಬೇಡ್ಕರ್ ಪ್ರತಿಮೆಯ ಉದ್ಘಾಟನೆಗೆ ಶೀಘ್ರವೇ ದಿನಾಂಕ ನಿಗದಿ = ಶಾಸಕ

ಚನ್ನರಾಯಪಟ್ಟಣದ ವಿಧಾನಸೌಧದೆದುರು ನಿರ್ಮಿಸಲಾಗಿರುವ ಅಂಬೇಡ್ಕರ್ ಪ್ರತಿಮೆಯ ಅನಾವರಣ ಕುರಿತಂತೆ ಶಾಸಕ ಸಿ.ಎನ್.ಬಾಲಕೃಷ್ಣ ಪ್ರತಿಮೆ ವೀಕ್ಷಿಸಿ ಮಾತನಾಡಿದರು. ಜಿ.ಎಸ್.ಶಂಕರಪ್ಪ,ಡಿ.ಆರ್. ತ್ಯಾಗರಾಜು, ಆರ್.ಯತೀಶ್ ಕುಮಾರ್ ಹಾಗೂ ಸಮಾಜದ ಮುಖಂಡರುಗಳು ಜೊತೆಗಿದ್ದರು.
ಚನ್ನರಾಯಪಟ್ಟಣದ ವಿಧಾನಸೌಧದೆದುರು ನಿರ್ಮಿಸಲಾಗಿರುವ ಅಂಬೇಡ್ಕರ್ ಪ್ರತಿಮೆಯ ಅನಾವರಣ ಕುರಿತಂತೆ ಶಾಸಕ ಸಿ.ಎನ್.ಬಾಲಕೃಷ್ಣ ಪ್ರತಿಮೆ ವೀಕ್ಷಿಸಿ ಮಾತನಾಡಿದರು. ಜಿ.ಎಸ್.ಶಂಕರಪ್ಪ,ಡಿ.ಆರ್. ತ್ಯಾಗರಾಜು, ಆರ್.ಯತೀಶ್ ಕುಮಾರ್ ಹಾಗೂ ಸಮಾಜದ ಮುಖಂಡರುಗಳು ಜೊತೆಗಿದ್ದರು.
Published on
ಉದ್ಘಾಟನೆಗೆ ಶೀಘ್ರದಲ್ಲೇ ಸೂಕ್ತವಾದ ದಿನಾಂಕವನ್ನು ನಿಗದಿಪಡಿಸಲಾಗುವುದೆಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.

ಪಟ್ಟಣದ ಮಿನಿ ವಿಧಾನಸೌಧದೆದುರು ನಿರ್ಮಿಸಲಾಗಿರುವ ಅಂಬೇಡ್ಕರ್ ಪ್ರತಿಮೆಯ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದ ಅವರು, ಪ್ರತಿಮೆ ಅನಾವರಣಕ್ಕೆ ಜನವರಿ 26ರಂದು ದಿನಾಂಕ ನಿಗದಿಯಾಗಿತ್ತು ಕಾರಣಾಂತರಗಳಿಂದ ದಿನಾಂಕವನ್ನು ಮುಂದೂಡಲಾಗಿದೆ. ಸಮಾಜ ಕಲ್ಯಾಣ ಸಚಿವರಾದ ಎಚ್.ಸಿ.ಮಹದೇವಪ್ಪನವರು
ಕಾರ್ಯಕ್ರಮದ ಸಲುವಾಗಿ ಹೊಳೆನರಸಿಪುರಕ್ಕೆ ತೆರಳುವ ಮಾರ್ಗಮಧ್ಯೆ ಪಟ್ಟಣಕ್ಕೆ ಭೇಟಿ ನೀಡಿ ಅಂಬೇಡ್ಕರ್ ಪ್ರತಿಮೆಯನ್ನ ವೀಕ್ಷಿಸಿ ಮುಖಂಡರೊಂದಿಗೆ ಚರ್ಚಿಸಿರುವುದು ಸ್ವಾಗತರ್ಥ ಎಂದ ಅವರು, ಪ್ರತಿಮೆ ಅನಾವರಣಕ್ಕೆ ಸಂಬಂಧಿಸಿದಂತೆ ಹಲವಾರು ಬಾರಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರೊಂದಿಗೆ ಚರ್ಚಿಸಿದ್ದು, ಪ್ರತಿಮೆ ಕೆಳಭಾಗದಲ್ಲಿ ಅಭಿವೃದ್ಧಿ ಕಾಮಗಾರಿಗಳು ಬಾಕಿ ಉಳಿದಿದ್ದು ಪ್ರತಿಮೆ ಮುಂಭಾಗ ಪ್ರತಿಮೆಗೆ ಅಡ್ಡವಾಗಿರುವ ಸಣ್ಣ ಮರಗಳನ್ನು ತೆರವುಗೊಳಿಸಲು ಮುಖಂಡರು ಮನವಿ ಮಾಡಿದ್ದು ಹಾಗೂ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಸುತ್ತಲೂ ನಿರ್ಮಾಣ ಮಾಡಲಾಗಿರುವ ಗ್ರಿಲ್‌ ಅಡ್ಡಿಯಾಗುತ್ತಿರುವುದರಿಂದ ಸಣ್ಣಪುಟ್ಟ ಮಾರ್ಪಾಡು ಮಾಡಿ ಕಾಮಗಾರಿಗಳೆಲ್ಲವನ್ನು ಪೂರ್ಣಗೊಳಿಸಿ ಸಚಿವರೊಂದಿಗೆ ಚರ್ಚಿಸಿ ಸೂಕ್ತವಾದ ದಿನಾಂಕವನ್ನು ನಿಗದಿಪಡಿಸಿ ಎಲ್ಲಾ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರೊಂದಿಗೆ ಚರ್ಚಿಸಿ ಅವರುಗಳ ಸಲಹೆ ಪಡೆದು ಯಾವುದೇ ಲೋಪವಾಗದಂತೆ ಗೌರವಪುರಕವಾಗಿ ಪ್ರತಿಮೆ ಅನಾವರಣಕ್ಕೆ ಕ್ರಮ ಕೈಗೊಳ್ಳಲಾಗುವುದೆಂದರು.
ಇದೇ ಆವರಣದಲ್ಲಿ ಮಹಾತ್ಮ ಗಾಂಧಿಯವರ ಪುತ್ತಳಿಯನ್ನು ನಿರ್ಮಿಸಲು ಉದ್ದೇಶಿಸಿದ್ದು ಅಡಿಪಾಯದ ನಕ್ಷೆ ಸಿದ್ಧವಾಗಿದ್ದು, ಕಾಮಗಾರಿಯನ್ನು ಪ್ರಾರಂಭಿಸಲು ಸೂಚಿಸಲಾಗಿದ್ದು ಶೀಘ್ರದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ಪುತ್ತಳಿ ನಿರ್ಮಾಣವಾಗಿ ಪುತ್ತಳಿ ಸ್ಥಾಪನೆ ಮಾಡಲು ಮೂರ್ನಾಲ್ಕು ತಿಂಗಳು ಕಾಲಾವಕಾಶದ ಅವಶ್ಯಕತೆ ಇದ್ದು, ಕಾಮಗಾರಿಗಳ ಮುಗಿದ ನಂತರ ಪುತ್ತಳಿ ಅನಾವರಣಕ್ಕೆ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಮುಖಂಡರಾದ ವಳಗೇರಹಳ್ಳಿ ಪುಟ್ಟಸ್ವಾಮಿ, ಮಂಜುನಾಥ್ ಚಂದ್ರಪ್ಪ ವಾರ್ಡನ್ ಮಂಜಣ್ಣ, ರವಿ, ಧರಣೇಶ್, ಲಕ್ಷ್ಮಣ್, ಟಿಎಪಿಸಿಎಂಎಸ್‌ನ ಅಧ್ಯಕ್ಷ ವೆಂಕಟೇಶಮೂರ್ತಿ ನಿರ್ದೇಶಕ ಅನಿಲ್ ಮರಗೂರು, ಸೇರಿ ತಹಶೀಲ್ದಾರ್.ಜಿ.ಎಸ್ಮ ಶಂಕರಪ್ಪ, ಸಮಾಜ ಕಲ್ಯಾಣಾಧಿಕಾರಿ ಡಿ.ಆರ್.ತ್ಯಾಗರಾಜ್, ಪುರಸಭಾ ಮುಖ್ಯಾಧಿಕಾರಿ ಆರ್‌ಯತೀಶ್ ಕುಮಾರ್ ಸೇರಿ ಇತರರು ಇದ್ದರು.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net