ಬಾಂಗ್ಲಾದೇಶದಲ್ಲಿನ ಹಿಂದೂಗಳ ಹತ್ಯೆ ಖಂಡನೀಯ.

ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಏರ್ಪಡಿಸಿದ್ದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ 2024-25 ನೇ ಸಾರಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯನ್ನು ತಾಲೂಕು ಆಡಳಿತ ವತಿಯಿಂದ ಸನ್ಮಾನಿಸಲಾಯಿತು. ಹೆಚ್.ಎನ್. ದೀಪ, ನೇತ್ರಾವತಿ, ಲೋಕೇಶ್ ಹಡೇನಹಳ್ಳಿ ಆರ್. ಯತೀಶ್ ಕುಮಾರ್, ಜಿ.ಆರ್.ಮೂರ್ತಿ ಇದ್ದರು.
ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಏರ್ಪಡಿಸಿದ್ದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ 2024-25 ನೇ ಸಾರಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯನ್ನು ತಾಲೂಕು ಆಡಳಿತ ವತಿಯಿಂದ ಸನ್ಮಾನಿಸಲಾಯಿತು. ಹೆಚ್.ಎನ್. ದೀಪ, ನೇತ್ರಾವತಿ, ಲೋಕೇಶ್ ಹಡೇನಹಳ್ಳಿ ಆರ್. ಯತೀಶ್ ಕುಮಾರ್, ಜಿ.ಆರ್.ಮೂರ್ತಿ ಇದ್ದರು.
Published on
ಚನ್ನರಾಯಪಟ್ಟಣ:: ನೆರೆಯ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಹತ್ಯೆ ಖಂಡನೀಯ, ಆಲ್ಲಿ ಶಾಂತಿ ಮರುಸ್ಥಾಪಿಸಿ ಜಾತ್ಯತೀತವಾಗಿ ಎಲ್ಲ ಧರ್ಮಿಯರಿಗೆ ಶಕ್ತಿ ತುಂಬುವ ಕೆಲಸವನ್ನು ಪ್ರಪಂಚದ ಆಗ್ರಗಣ್ಯ ದೇಶಗಳು, ಮತ್ತು ವಿಶ್ವಸಂಸ್ಥೆ ಮಾಡುವಲ್ಲಿ ಮುಂದಾಗಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಪಟ್ಟಣದಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರದಂದು ಏರ್ಪಡಿಸಿದ್ದ 77ನೇ ಗಣರಾಜ್ಯೋತ್ಸವ ದಿನದಂದು ಭಾಗವಹಿಸಿ ಅಧ್ಯಕ್ಷಿಯ ನುಡಿಗಳನ್ನಾಡಿದ ಅವರು, ಬಾಂಗ್ಲಾ ಪ್ರತ್ಯೇಕ ದೇಶವಾಗಿ ರಚನಯಾಗುವ ವೇಳೆ ದೇಶ ಕೊಟ್ಟ ಸಹಕಾರವನ್ನು ಮರೆತು ದುರ್ನಡತೆ ತೋರುತ್ತಿದೆ. ಹಿಂದೂಗಳನ್ನು ಗುರಿಯಾಗಿಸಿ 25 ಜನರನ್ನು ಹತ್ಯೆ ಮಾಡಿರುವುದು ಖಂಡನೀಯ, ಅಸ್ಸಾಂ. ಪಶ್ಚಿಮ ಬಂಗಳಾದ ಮೂಲಕ ಬಾಂಗ್ಲಾ ನುಸುಳುಕೊರರ ಹಾವಳಿ ಹೆಚ್ಚಿದೆ. ಆಕ್ರಮವಾಗಿ ಬಂದವರು ಇಲ್ಲಿನ ಆಧಾರ್ ಕಾರ್ಡ್ ಪಡೆದು ದೇಶವ್ಯಾಪ್ತಿ ನೆಲೆಸಿದ್ದಾರೆ. ಅವರಿಗೆ ತೊಂದರೆನೀಡುವ ಕೆಲಸಕ್ಕೆ ಮುಂದಾಗಿಲ್ಲ, ಇದು ನಮ್ಮ ದೌರ್ಬಲ್ಯವಲ್ಲ, ನಾವು ಶಾಂತಿ ಪ್ರಿಯರು, ಇಡೀ ಪ್ರಪಂಚಕ್ಕೆ ಶಾಂತಿ ಕೊಟ್ಟ ಹೆಮ್ಮೆಯ ದೇಶ, ನಮ್ಮನ್ನು ಕೆಣಕಿದರೇ ಸುಮ್ಮನೇ ಬಿಡುವುದಿಲ್ಲ ಎಂಬುದನ್ನು ಈಗಾಗಲೇ ಹಲವು ಯದ್ದಗಳ ಮೂಲಕ ಸಾಬೀತುಪಡಿಸಿದ್ದೇವೆ. ಇನ್ನಾದರೂ ಹಿಂದೂಗಳ ಹತ್ಯೆ ನಿಲ್ಲುವಂತಾಗಬೇಕು ಎಂದರು.

ಅಂತರೀಕ ಭಿನ್ನಾಭಿಪ್ರಯಗಳಿಗೆ ಅವಕಾಶ ನೀಡದೇ ದೇಶದ ಭದ್ರತೆಯ ದೃಷ್ಠಿಯಿಂದ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದೊಂದಿಗೆ ಸಮನ್ವಯತೆ ಸಾಧಿಸಬೇಕು, ಯಶಸ್ವಿ ಪ್ರಜಾಪ್ರಭುತ್ವ ರಾಷ್ಟçವಾಗಿರುವ ದೇಶ ಪ್ರಪಂಚಲ್ಲೆ 4ನೇ ಅತಿದೊಡ್ಡ ಅರ್ಥಿಕ ಶಕ್ತಿಯಾಗಿ ಹೊರಹೊಮ್ಮಿರುವುದು ಅಭಿವೃದ್ಧಿಯ ಸಂಕೇತ, ಅಂಬೇಡ್ಕರ್ ಸಂವಿಧಾನ ನೀಡಿದ ಮೇಲೆ ದೇಶ ಶೈಕ್ಷಣೀಕ, ಸಾಮಾಜಿಕ, ವೈಜ್ಞಾನೀಕ, ಮತ್ತು ಅರ್ಥಿಕವಾಗಿ ಸದೃಡವಾಗಿ ಬೆಳೆದಿದೆ ಎಂದವರು ಇತ್ತೀಚೆಗೆ ಹೆಚ್ಚಿರುವ ಡ್ರಗ್ಸ್ ಮಾಫೀಯಾದಲ್ಲಿ ಯುವಕರು ಬೀಳುತ್ತಿರುವುದು ಆತಂಕಕಾರಿ ವಿಚಾರ, ಯುವಕರು ಎಚ್ಚೇತ್ತು ಸನ್ಮಾರ್ಗದಲ್ಲಿ ನಡೆದರೇ ಭಾರತ ಪ್ರಪಂಚದ ಅಗ್ರಗಣ್ಯ ದೇಶವಾಗಲಿದೆ. ನಮ್ಮ ನಡವಳಿಕೆಗಳ ಆಧಾರದ ಮೇಲೆ ಜೀವನ ರೂಪಿತ, ಉತ್ತಮ ನಡವಳಿಕೆ ಮೂಲಕ ದೇಶದ ಆಸ್ತಿಯಾಗಬೇಕು ಎಂದರು.

ತಾಲ್ಲೂಖು ಕಛೇರಿ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ತಳಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಶೀಘ್ರದಲ್ಲೆ ರಾಜ್ಯದ ಹಲವು ಸಚಿವರು, ಹಾಗೂ ಮಾಜಿ ಪ್ರಧಾನಿ ದೇವೆಗೌಡರ ದಿನಾಂಕ ನಿಗದಿಯೊಂದಿಗೆ ಶೀಘ್ರ ಉದ್ಘಾಟನೆಗೆ ಮುಂದಾಗಲಿದ್ದೇವೆ. ಇದರೊಂದಿಗೆ ಶೀಘ್ರ ಗಾಂಧೀಜಿಯವರ ಪುತ್ತಳಿ ಕಾರ್ಯವು ನಡೆಯುತ್ತಿದೆ. ರೈತ ದೇಶದ ಆಸ್ತಿ, ಆತನ ಆಧಾರಕ್ಕೆ ಶಕ್ತಿ ತುಂವುವ ಕೆಲಸವನ್ನು ಶಾಸಕನಾಗಿ ಮಾಡುತ್ತಿದ್ದು, ತಾಲ್ಲೂಕಿನಲ್ಲಿ ಏತ ನೀರಾವರಿಗಳ ಮೂಲಕ ಶೇ. 85ರಷ್ಟು ನೀರಾವರಿ ಕಲ್ಪಿಸಲಾಗಿದೆ ಎಂದರು.

ಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರ್ ಜಿ.ಎಸ್. ಶಂಕರಪ್ಪ ಧ್ವಜಸಂದೇಶ ನೀಡಿ, ಬ್ರಿಟಿಷರ ಆಡಳಿತದಿಂದ ಮುಕ್ತಿ ಹೊಂದಿದ ನಂತರ, ಜಗತ್ತಿನ ಅತಿದೊಡ್ಡ ಲಿಖಿತ ಸಂವಿಧಾನವನ್ನು ಅಳವಡಿಸಿಕೊಂಡ ಭಾರತ, ಇಂದು ಜಾಗತಿಕ ಮಟ್ಟದಲ್ಲಿ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ಒಕ್ಕೂಟ ವ್ಯವಸ್ಥೆಗೆ ಶಕ್ತಿ ತುಂಬಿದವರು ಡಾ.ಬಿ.ಆರ್.ಅಂಬೇಡ್ಕರ ಅವರ ನೇತೃತ್ವದಲ್ಲಿ ರಚಿತವಾದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯವನ್ನು ಒದಗಿಸಿದೆ. ಸಾಮಾಜಿಕ ನ್ಯಾಯ, ಸಮಾನತೆ, ಸಹಬಾಳ್ವೆ, ಭಾತೃತ್ವ ನಮ್ಮ ಸಂವಿಧಾನದ ಹೆಮ್ಮೆಯಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿಯೇ ಅತಿ ದೊಡ್ಡ ಯಶಸ್ವಿ ಪ್ರಜಾಪ್ರಭುತ್ವ ಹೊಂದಿರುವ ದೇಶ ಭಾರತ. ಶೈಕ್ಷಣೀಕ, ಸಾಮಾಜಿಕ, ವೈಜ್ಞಾನೀಕ, ವೈದ್ಯಕೀಯವಾಗಿ ಬಹು ಎತ್ತರಕ್ಕೆ ಬೆಳೆಯುತ್ತಿರುವ ದೇಶ ಈ ಮೂಲಕ ಅಭಿವೃದ್ಧಿ ಹೊಂದುತ್ತಿರುವ ಸಾಲಿಗೆ ಸೇರಿದೆ. ದೇಶದಲ್ಲಿನ ವಿಶ್ವದಲ್ಲೆ ಅತಿಹೆಚ್ಚಿನ ಯುವಶಕ್ತಿ ಹೊಂದುವ ಮೂಲಕ ಅತ್ಯಂತ ಬಲಿಷ್ಠವಾಗಿ ಬೆಳೆದಿದೆ. ವೈವಿಧ್ಯತೆಯಲ್ಲಿ ಏಕತೆಯನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ದೇಶದ ಅಭಿವೃದ್ಧಿಯಲ್ಲಿ ಯುವಜನತೆಯ ಪಾತ್ರ ಪ್ರಮುಖವಾಗಿದೆ. ಗಣರಾಜ್ಯೋತ್ಸವವು ಭಾರತೀಯರಾದ ನಮಗೆ ಹೆಮ್ಮೆಯ ಸಂಕೇತ. ನಾವೆಲ್ಲರೂ ಸಂವಿಧಾನದ ಆಶಯಗಳನ್ನು ಪಾಲಿಸುತ್ತಾ, ದೇಶದ ಏಕತೆ ಮತ್ತು ಪ್ರಗತಿಗಾಗಿ ಶ್ರಮಿಸೋಣ ಎಂದು ತಿಳಿಸಿದರು.
ಈ ಸಂಧರ್ಭ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 21 ಮಂದಿ ಗಣ್ಯರನ್ನು ಸನ್ಮಾನಿಸಲಾಯಿತು. 2024-25 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸರ್ಕಾರಿ ಪ್ರೌಢಶಾಲೆ,
ವಿದ್ಯಾರ್ಥಿಗಳಾದ ಸಿ.ಎನ್.ಲಕ್ಷ್ಮಿ, ಡಿ.ಪಿ.ತನುಶ್ರೀ, ಪೇಟೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಜಯಶ್ರೀ, ಹಿರಿಸಾವೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಡಿ.ಬೃಂದಾ ಇವರುಗಳಿಗೆ ಸರ್ಕಾರದ ವತಿಯಿಂದ 50,000 ಚೆಕ್ ನೀಡಿ ಗೌರವಿಸಲಾಯಿತು. ಇದಕ್ಕೂ ಮುನ್ನಾ ಶಾಸಕರು, ತಹಶೀಲ್ದಾರ್ ಮತ್ತು ಡಿವೈಎಸ್‌ಪಿ ಎನ್.ಕುಮಾರ್‌ರವರು ಪಥಸಂಚಲನಗಳಿಂದ ಗೌರವವಂದನೆ ಸ್ವೀಕರಿಸಿದರು. ನಂತರ ರಾಧಾಕೃಷ್ಣ ವಿದ್ಯಾ ಶಾಲೆ, ಮತ್ತು ಪಿಎಂಶ್ರೀ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತ್ತು.

ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಜಿ. ಆರ್.ಹರೀಶ್, ಪುರಸಭಾ ಮುಖ್ಯಾಧಿಕಾರಿ ಆರ್. ಯತೀಶ್ ಕುಮಾರ್, ಟಿಎಪಿಸಿಎಂಎಸ್ ನ ಅಧ್ಯಕ್ಷ ವೆಂಕಟೇಶ್ ಮೂರ್ತಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಿ‌ ಆರ್.ಮೂರ್ತಿ, ಗ್ಯಾರೆಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಜಿ.ಎಲ್.ಪ್ರಕಾಶಗೌಡ ಬಿಇಓ ಎಚ್.ಎನ್.ದೀಪ, ಬಿಆರ್‌ಸಿ ಕೆ.ಎನ್.ಅನಿಲ್, ತಾಲೂಕು ನೌಕರರ ಸಂಘದ ಅಧ್ಯಕ್ಷ ಎಂ.ಆರ್. ಮಂಜುನಾಥ್, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್,ಕೆಡಿಪಿ ಸದಸ್ಯರಾದ ಮಹೇಶ್ ಕಬ್ಬಾಳು, ಗುರುಪ್ರಸಾದ್, ಮಧುಸೂದನ್, ಯೋಗೇಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net