ರಾತ್ರಿ 8 ಗಂಟೆಗೆ ಸರಿಯಾಗಿ ಮಹಾಮಂಗಳಾರತಿ ಕರ್ಪೂರದಾರತಿ ಸಲ್ಲಿಸಲಾಯಿತು. ನಂತರ ಬಂದ ಭಕ್ತಾದಿಗಳಿಗೆ ಎಂಪಿ ಶಿವಲಿಂಗಪ್ಪ ಮತ್ತು ಕುಟುಂಬ ವರ್ಗದಿಂದ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಾಡಾಳು ಸೇರಿದಂತೆ ಕೊಪ್ಪಲು ಸೀತಾಪುರ, ರೇಹಳ್ಳಿ, ವೈಜಿಹಳ್ಳಿ, ಡಿ.ಎಂ.ಕುರ್ಕೆ ಶಶಿವಾಳ ರಾಂಪುರ ಸೊಪ್ಪಿನ ಹಳ್ಳಿ, ಪಿ.ಹೊಸಹಳ್ಳಿ ಕಿತ್ತನಕೆರೆ, ದೋಣನಕಟ್ಟೆ ಶಂಕರನಹಳ್ಳಿ, ಮದ್ದರಹಳ್ಳಿ, ಕಡಲಮಗೆ ಗ್ರಾಮಗಳಿಂದ ಭಕ್ತಾದಿಗಳು ಆಗಮಿಸಿ ದೇವಿ ದರ್ಶನ ಪಡೆದು ಪುನೀತರಾದರು.