ಕಾಡಾನೆ ದಾಳಿಗೆ ಬೆಳೆ ಹಾನಿ

ಅರಕಲಗೂಡು ತಾಲೂಕಿನ ಬಾಗದಾಳು ಗ್ರಾಮದ ರೈತ ಬಿ.ಜೆ. ಕಾಂತರಾಜು ಅವರ ತೋಟದಲ್ಲಿನ ಅಡಿಕೆ ಮರಗಳನ್ನು ಕಾಡಾನೆಗಳು  ಹಾನಿಮಾಡಿರುವುದು.
ಅರಕಲಗೂಡು ತಾಲೂಕಿನ ಬಾಗದಾಳು ಗ್ರಾಮದ ರೈತ ಬಿ.ಜೆ. ಕಾಂತರಾಜು ಅವರ ತೋಟದಲ್ಲಿನ ಅಡಿಕೆ ಮರಗಳನ್ನು ಕಾಡಾನೆಗಳು ಹಾನಿಮಾಡಿರುವುದು.
Published on
ಅರಕಲಗೂಡು : ತಾಲೂಕಿನ ಮಲ್ಲಿಪಟ್ಟಣ ಹೋಬಳಿಯ ಬಾಗದಾಳು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಶುಕ್ರವಾರ ರಾತ್ರಿ ಎರಡು ಕಾಡಾನೆಗಳು ಕಾಫಿ ಹಾಗೂ ಅಡಕೆ ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿವೆ.
ಗ್ರಾಮದ ಕಾಫಿ ಬೆಳೆಗಾರರ ಸಂಘದ ಎಚ್.ಡಿ.ಪಿ.ಎ. ನಿರ್ದೇಶಕ ಬಿ.ಜೆ. ಕಾಂತರಾಜು ಅವರಿಗೆ ಸೇರಿದ ತೋಟಕ್ಕೆ ಮಧ್ಯರಾತ್ರಿ ವೇಳೆ ಎರಡು ಕಾಡಾನೆಗಳು ನುಗ್ಗಿ ದಾಂಧಲೆ ನಡೆಸಿವೆ. ಅಡಕೆ ತೋಟದ ರಕ್ಷಣೆಗೆ ಅಳವಡಿಸಲಾಗಿದ್ದ ಕಬ್ಬಿಣದ ಗೇಟ್ ಸಂಪೂರ್ಣವಾಗಿ ಮುರಿದು ಒಳ ನುಗ್ಗಿದ ಆನೆಗಳು ಸುಮಾರು 20 ರಿಂದ 25ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಮುರಿದು ಹಾಕಿವೆ. ಅಲ್ಲದೆ ಕಾಫಿ ಗಿಡಗಳು ಹಾಗೂ ಇತರೆ ಬೆಳೆಗಳಿಗೂ ಹಾನಿಪಡಿಸಿವೆ.
ಶನಿವಾರ ಬೆಳಗ್ಗೆ ತೋಟಕ್ಕೆ ತೆರಳಿದ ಕಾಂತರಾಜು ಅವರು ಬೆಳೆ ನಾಶವಾಗಿರುವುದನ್ನು ಕಂಡು ಆತಂಕ ವ್ಯಕ್ತಪಡಿಸಿದರು. ಲಕ್ಷಾಂತರ ರೂ.ವೆಚ್ಚ ಮಾಡಿ ಬೆಳೆ ಬೆಳೆಸಿದ್ದರೂ ಕಾಡಾನೆಗಳ ದಾಳಿಯಿಂದ ದೊಡ್ಡ ಪ್ರಮಾಣದ ನಷ್ಟ ಸಂಭವಿಸಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net