ಸಿಡಿಲು ಬಡಿದು ಹಸು ಸಾವು

ಹೊಳೆನರಸೀಪುರ ತಾಲೂಕಿನ ಆನೆ ಕನ್ನಂಬಾಡಿಯಲ್ಲಿ ಸಿಡಿಲು ಬಡಿದು ಹಸು ಸಾವನ್ನಪ್ಪಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಹೊಳೆನರಸೀಪುರ ತಾಲೂಕಿನ ಆನೆ ಕನ್ನಂಬಾಡಿಯಲ್ಲಿ ಸಿಡಿಲು ಬಡಿದು ಹಸು ಸಾವನ್ನಪ್ಪಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • lightning
ಹೊಳೆನರಸೀಪುರ: ತಾಲೂಕಿನ ಹಳ್ಳಿ ಮೈಸೂರು ಹೋಬಳಿ ಆನೆ ಕನ್ನಂಬಾಡಿ ಗ್ರಾಮದಲ್ಲಿ ಗುರುವಾರ ಸಂಜೆ ಸಿಡಿಲು ಬಡಿದು ಹಸು ಮೃತಪಟ್ಟಿದೆ.
ಗ್ರಾಮದ ಯೋಗೇಶ್ ಅವರು ಹಸು ಸಿಡಿಲು ಬಡಿದು ಮರಣ ಹೊಂದಿದ್ದು, ಸ್ಥಳಕ್ಕೆ ಪಶು ವೈದ್ಯಾಧಿಕಾರಿ ನೂತನ್, ಗ್ರಾಮ ಲೆಕ್ಕಾಧಿಕಾರಿ ದಿವ್ಯಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಹಸುವಿನ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸರ್ಕಾರದ ವತಿಯಿಂದ ಹಸುವಿನ ಮಾಲೀಕರಿಗೆ 35 ಸಾವಿರ ರೂ. ಪರಿಹಾರಧನ ನೀಡಲಾಗುವುದು ಎಂದು ಪಶು ಆಡಳಿತ ವೈದ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ ಮಾಹಿತಿ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net