ಡಿ.14ರಂದು ತಾಲೂಕಿನ ಮಾದಿಹಳ್ಳಿ ಹೋಬಳಿ ಇ ಹೊಸಳ್ಳಿ ಗ್ರಾಮದ ಜಯಣ್ಣ ಎಂಬುವರು 15 ವರ್ಷದ ಮಗನಿಗೆ ಕಾರನ್ನು ಚಲಾಯಿಸಲು ನೀಡಿದ್ದರು. ಈ ವೇಳೆ ಬೇಲೂರು ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ರೇವಣ್ಣ ಪರಿಶೀಲಿಸಿದಾಗ ಅಪ್ರಾಪ್ತ ಬಾಲಕ ವಾಹನ ಚಲಾಯಿತ್ತಿರುವುದು ದೃಢಪಟ್ಟಿದೆ. ಬಳಿಕ ಜಯಣ್ಣ ಅವರಿಗೆ (ಸಿಸಿ 564/2025) ನೋಟಿಸ್ ಮೂಲಕ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಕಳುಹಿಸಲಾಗಿತ್ತು. ಬೇಲೂರಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಕರಣ ಪರಿಶೀಲಿಸಿದ ನ್ಯಾಯಾಧೀಶೆ ಎಂ.ಎಸ್.ಶಶಿಕಲಾ ಅವರು ಪಾಲಕರಿಗೆ 25 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.