ಜನರಿಗೆ ಮೂಲಸೌಕರ್ಯ ಕಲ್ಪಿಸಲು ನಿರಂತರ ಹೋರಾಟ

ಅರಸೀಕೆರೆ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಒಳಾಂಗಣ ಕ್ರಿಡಾಂಗಣ ನಿರ್ಮಾಣಕ್ಕೆ ಕೆ.ಎಂ.ಶಿವಲಿಂಗೇಗೌಡ ಭೂಮಿ ಪೂಜೆ ನೆರವೇರಿಸಿದರು. ಜಿ.ಬಿ.ಶಶಿಧರ್, ಧರ್ಮಶೇಖರ್, ಚಂದ್ರಶೇಖರ್, ಸಮೀವುಲ್ಲಾ, ಶಿವಯ್ಯ, ಗೌಸ್ ಖಾನ್ ಇತರರಿದ್ದರು.
ಅರಸೀಕೆರೆ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಒಳಾಂಗಣ ಕ್ರಿಡಾಂಗಣ ನಿರ್ಮಾಣಕ್ಕೆ ಕೆ.ಎಂ.ಶಿವಲಿಂಗೇಗೌಡ ಭೂಮಿ ಪೂಜೆ ನೆರವೇರಿಸಿದರು. ಜಿ.ಬಿ.ಶಶಿಧರ್, ಧರ್ಮಶೇಖರ್, ಚಂದ್ರಶೇಖರ್, ಸಮೀವುಲ್ಲಾ, ಶಿವಯ್ಯ, ಗೌಸ್ ಖಾನ್ ಇತರರಿದ್ದರು.
Published on
ಅರಸೀಕೆರೆ: ಕ್ರೀಡೆ, ಶಿಕ್ಷಣ, ಆರೋಗ್ಯ ಸೇರಿದಂತೆ ಜನರಿಗೆ ಮೂಲಸೌಕರ್ಯ ಕಲ್ಪಿಸಲು ನಿರಂತರ ಹೋರಾಟ ನಡೆಸಿದ್ದೇನೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಅಂದಾಜು ಆರು ಕೋಟಿ ರೂ.ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು.
ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳ ಮನಗಂಡು ತಾಲೂಕಿನ ವಿವಿಧ ಹೋಬಳಿ ಕೇಂದ್ರಗಳ ವ್ಯಾಪ್ತಿಯಲ್ಲಿ ವಸತಿ ಶಾಲೆ ತೆರೆಯಲಾಗಿದೆ. ಉನ್ನತ ಶಿಕ್ಷಣದ ಅಗತ್ಯತೆ ಅರಿತು ಇಂಜಿನಿಯರಿಂಗ್ ಹಾಗೂ ಡಿಪ್ಲೊಮಾ ಕಾಲೇಜು ಕೂಡ ಕಾರ್ಯಾರಂಭ ಮಾಡಿವೆ. ಕಟ್ಟಡ ಕಾರ್ಮಿಕರ ಮಕ್ಕಳ ಶಾಲೆಗೆ ಶೀಘ್ರದಲ್ಲೇ ಶಂಕುಸ್ಥಾಪನೆ ಮಾಡಲಾಗುವುದು. ನಗರ ನಿವಾಸಿಗಳ ಆರೋಗ್ಯ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ನೆರವಾಗಲಿ ಎನ್ನುವ ಉದ್ದೇಶದಿಂದ ಅಂದಾಜು ಆರು ಕೋಟಿ ರೂ.ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಿದ್ದು, ಟೆನಿಸ್, ಚೆಸ್ ಒಳಗೊಂಡಂತೆ ವಿವಿಧ ಆಟೋಟಗಳಿಗೆ ಅನುವು ಮಾಡಿಕೊಡಲಾಗುವುದು.ರಾಜಕೀಯ ವಿರೋಧಿಗಳ ಟೀಕೆ, ಟಿಪ್ಪಣಿ ನಡುವೆಯೂ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಗಲಿರುಳು ದುಡಿಯುತ್ತಿದ್ದೇನೆ ಎಂದರು.
ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಗಂಜಿಗೆರೆ ಚಂದ್ರಶೇಖರ್ ಮಾತನಾಡಿ, ಇನ್ ಡೋರ್ ಆಟಗಳಿಗೆ ಅನುದಾನ ತಂದಿರುವುದು ಸ್ವಾಗತಾರ್ಹ. ಜತೆಗೆ ಗೀಜಿಹಳ್ಳಿ ಗ್ರಾಮದ ಬಳಿ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಬೇಕು ಎಂದು ಮನವಿ ಮಾಡಿದರು.
ಕ್ರೀಡಾ ಇಲಾಖೆ ಅಧಿಕಾರಿ ಆನಂದಮೂರ್ತಿ, ಗುತ್ತಿಗೆದಾರ ಮುರಳೀಧರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್, ನಗರ ಯೋಜನಾ ಪ್ರಾಧಿಕಾರದ ಸದಸ್ಯ ಬಾಲಮುರುಗನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಬಿ.ಶಶಿಧರ್, ನಗರಸಭೆ ಮಾಜಿ ಅಧ್ಯಕ್ಷ ಸಮೀವುಲ್ಲಾ, ಜಿಟಿಎಸ್ ಗೌಸ್ ಖಾನ್, ರುಕ್ಮಿಣಿ ಜಯಕುಮಾರ್, ಮಂಜುಳಾ ಬಾಯಿ, ಕಿರಣ್ ಕುಮಾರ್, ಮಂಜುನಾಥ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net