ಗ್ರಾಪಂನಿಂದ ಗ್ರಂಥಾಲಯ ಕಟ್ಟಡ ನಿರ್ಮಾಣ ಶ್ಲಾಘನೀಯ

ಅರೇಹಳ್ಳಿ ಗ್ರಾಮ ಪಂಚಾಯಿತಿಯಿಂದ ನಿರ್ಮಿಸಲಾದ ವಾಣಿಜ್ಯ ಮಳಿಗೆ, ಗ್ರಂಥಾಲಯ ಕಟ್ಟಡವನ್ನು ಶಾಸಕ ಎಚ್.ಕೆ.ಸುರೇಶ್ ಉದ್ಘಾಟಿಸಿದರು.
ಅರೇಹಳ್ಳಿ ಗ್ರಾಮ ಪಂಚಾಯಿತಿಯಿಂದ ನಿರ್ಮಿಸಲಾದ ವಾಣಿಜ್ಯ ಮಳಿಗೆ, ಗ್ರಂಥಾಲಯ ಕಟ್ಟಡವನ್ನು ಶಾಸಕ ಎಚ್.ಕೆ.ಸುರೇಶ್ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಚ್.ಕೆ.ಸುರೇಶ್
  • ಅರೇಹಳ್ಳಿ ಗ್ರಾಮ ಪಂಚಾಯಿತಿ
ಬೇಲೂರು: ಸಾಮಾಜಿಕ ಜ್ಞಾನ ಹೆಚ್ಚಿಸುವ ಶಕ್ತಿ ಪುಸ್ತಕಗಳಿಗೆ ಇರುವುದರಿಂದ ದಿನನಿತ್ಯ ಪುಸ್ತಕ ಹಾಗೂ ದಿನಪತ್ರಿಕೆಗಳನ್ನು ಸಾಮೂಹಿಕವಾಗಿ ಓದಲು ಅರೇಹಳ್ಳಿ ಗ್ರಾಪಂನಿಂದ ಗ್ರಂಥಾಲಯ ಕಟ್ಟಡ ನಿರ್ಮಿಸಿರುವುದು ಶ್ಲಾಘನೀಯ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ತಾಲೂಕಿನ ಅರೇಹಳ್ಳಿ ಗ್ರಾಮ ಪಂಚಾಯಿತಿಯ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಅಟಲ್ ಬಿಹಾರಿ ವಾಜಪೇಯಿ ವಾಣಿಜ್ಯ ಮಳಿಗೆಗಳು ಹಾಗೂ 10 ಲಕ್ಷ ರೂ.ಗಳಲ್ಲಿ ನಿರ್ಮಿಸಲಾದ ಗ್ರಂಥಾಲಯ ಕಟ್ಟಡ ಮತ್ತು ಹೆಗ್ಗಡಿಹಳ್ಳಿ ರಸ್ತೆಯ ಘನ ತ್ಯಾಜ್ಯ ವಿಲೇವಾರಿ ಘಟಕ, ಕೇಶವನಗರದ ಸ್ಮಶಾನದ ಶೆಡ್‌ಗಳನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಅರೇಹಳ್ಳಿ ಗ್ರಾಪಂ ವ್ಯಾಪ್ತಿಗೆ ಸೇರಿದ ಪ್ರದೇಶಗಳ ಅಭಿವೃದ್ಧಿಗಾಗಿ ಸಂಪನ್ಮೂಲ ಕ್ರೋಡೀಕರಣ ಮಾಡುವ ಉದ್ದೇಶದಿಂದ ವಾಣಿಜ್ಯ ಮಳಿಗೆ ನಿರ್ಮಾಣವಾಗಿದೆ. ಯಾವುದೇ ಜಾತಿ, ಧರ್ಮದ ಭೇದವಿಲ್ಲದೆ ಪಂಚಾಯಿತಿಯ 22 ಸದಸ್ಯರ ಸಹಕಾರದಿಂದ ಐದು ವರ್ಷಗಳಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿರುವುದು ಉತ್ತಮ ಬೆಳವಣಿಗೆ. ಜತೆಗೆ ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕಾರಣ ಮಾಡದೆ ಸಮಾಜದ ಉನ್ನತಿಗಾಗಿ ಶ್ರಮಿಸಬೇಕಾಗಿರುವುದು ನಮ್ಮ ಕರ್ತವ್ಯ ಎಂದರು.
ಅರೇಹಳ್ಳಿ ಗ್ರಾಪಂ ಅಧ್ಯಕ್ಷ ಸಂಕಪ್ಪ, ಉಪಾಧ್ಯಕ್ಷ ಮೆಹಬೂಬ್ ಷರೀಫ್, ಪಿಡಿಒ ಚಂದ್ರಯ್ಯ, ಗ್ರಾಪಂ ಸದಸ್ಯರಾದ ಸಚಿನ್ ರೈ, ಮಹೇಶ್‌ಶೆಟ್ಟಿ, ವೀರೇಶ್, ಅಣ್ಣಪ್ಪ, ಪದ್ಮ, ಫಾತೀಮಾ, ಮಾಧುರಿ, ಮಮತಾ, ಮುನೇರಾ, ಪಾರ್ವತಿ, ಶಶಿ ಕುಮಾರಿ, ಫರ್ಹಾನಾ ಗ್ರಾಮಸ್ಥರಾದ ಸೋಮನಾಥ್, ಅಶೋಕ್ ಅರಸ್, ಚಂದ್ರಣ್ಣ, ಬಸವರಾಜ್, ಪ್ರಕಾಶ್, ಶಿವಪ್ಪ, ಶ್ರೀಕಾಮತ್ ನಾರ್ವೆ, ನಿಖಿಲ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net