ಸುಕ್ಷೇತ್ರ ಮಾಡಾಳಿನ ನೂತನ ದೇವಾಲಯದ ಆವರಣದಲ್ಲಿ ಧಾರ್ಮಿಕ ವಿಧಿ- ವಿಧಾನಗಳನ್ನು ಕೋಡಿಮಠದ ಉತ್ತರಾಧಿಕಾರಿ ಶ್ರೀ ಚೇತನ್ ಮರಿದೇವರು ನೆರವೇರಿಸಿದರು. ದೇವಸ್ಥಾನ ಸಮಿತಿಯ ಸದಸ್ಯರು, ಭಕ್ತರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
Sri Swarnagauramma Temple
ಅರಸೀಕೆರೆ ಗ್ರಾಮಾಂತರ:
ಅರಸೀಕೆರೆ ತಾಲೂಕಿನ ಕಣಕಟ್ಟೆ ಹೋಬಳಿಯ ಸುಕ್ಷೇತ್ರ ಮಾಡಾಳಿನ ಮೂಲ ಶ್ರೀ ಸ್ವರ್ಣ ಗೌರಮ್ಮ ಅವರ ನೂತನ ದೇವಸ್ಥಾನ ಹಾಗೂ ಕಳಸಾರೋಹಣ ಕಾರ್ಯಕ್ರಮ ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಹಾರನಹಳ್ಳಿ ಕೋಡಿಮಠ ಡಾ. ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರ ಆಶೀರ್ವಾದದಿಂದ ದೇವಾಲಯ ಲೋಕಾರ್ಪಣೆಗೊಂಡಿತು.
ಕೋಡಿಮಠದ ಉತ್ತರಾಧಿಕಾರಿ ಶ್ರೀ ಚೇತನ್ ಮರಿದೇವರ ಸಾನ್ನಿಧ್ಯ ಮತ್ತು ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿ ಸಮ್ಮುಖದಲ್ಲಿ ಸಕಲ ಧಾರ್ಮಿಕ ಆಚರಣೆಗಳು ಜರುಗಿದವು. ಗ್ರಾಮ ದೇವತೆ ಕರಿಯಮ್ಮ ದೇವಿ, ಚೌಡೇಶ್ವರಿ, ಬೊಮ್ಮಸಂದ್ರ ಚನ್ನಬಸವಣ್ಣ, ಕಡಲಮಗೆ ಬಸವಣ್ಣ, ಹೊಸಳ್ಳಿ ಬಸವಣ್ಣ, ರಂಗನಾಥಸ್ವಾಮಿ ಸೇರಿದಂತೆ 18 ಗ್ರಾಮಗಳ ದೇವರ ಮೂರ್ತಿ ಪೂಜಿಸಲಾಯಿತು.
ಜೇನುಕಲ್ ಸಿದ್ದೇಶ್ವರ ಸ್ವಾಮಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ರಾಜಶೇಖರ ಶಾಸಿಗಳು ಹೋಮ-ಹವನ ನಡೆಸಿಕೊಟ್ಟರು.
ಬಿದರೆ ದೊಡ್ಡ ಮಠದ ಪ್ರಭು ಕುಮಾರ ಶಿವಾಚಾರ್ಯ ಸ್ವಾಮೀಜಿ ವಿಮಾನ ಗೋಪುರದ ಮೇಲೆ ಕಳಸವನ್ನು ಕೆ. ಪ್ರತಿಷ್ಠಾಪಿಸಿದರು. ಶ್ರೀ ಚೇತನ್ ಮರಿದೇವರು, ನಿರಂಜನ ಪೀಠದ ಶ್ರೀ ರುದ್ರಮುನಿ ಸ್ವಾಮೀಜಿ, ಕೋಡಿಮಠದ ಮಹದೇವಪ್ಪ, ಸೇವಾ ಸಮಿತಿ ಅಧ್ಯಕ್ಷರು, ಸದಸ್ಯರು ಸೇರಿದಂತೆ ಸಾವಿರಾರು ಭಕ್ತರು, ಗ್ರಾಮಸ್ಥರು ಭಾಗಿಯಾಗಿದ್ದರು.