ಕುತಂತ್ರಿಗಳಿಗೆ ಕಾಂಗ್ರೆಸ್ ಕುಮ್ಮಕ್ಕು

ವಿಶ್ವ ಹಿಂದು ಪರಿಷತ್, ಬಜರಂಗ ದಳದಿಂದ ದತ್ತಮಾಲಾ ಅಭಿಯಾನ ಮತ್ತು ದತ್ತ ಜಯಂತಿ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಧಾರ್ಮಿಕ ಸಭೆಯನ್ನು ಗಣ್ಯರು ಉದ್ಘಾಟಿಸಿದರು.
ವಿಶ್ವ ಹಿಂದು ಪರಿಷತ್, ಬಜರಂಗ ದಳದಿಂದ ದತ್ತಮಾಲಾ ಅಭಿಯಾನ ಮತ್ತು ದತ್ತ ಜಯಂತಿ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಧಾರ್ಮಿಕ ಸಭೆಯನ್ನು ಗಣ್ಯರು ಉದ್ಘಾಟಿಸಿದರು.
Published on
ಬೇಲೂರು: ದೇಶದಲ್ಲಿ ಕುತಂತ್ರ ನಡೆಸುವವರಿಗೆ ಓಟಿನ ಆಸೆಗಾಗಿ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದ್ದು, ಮುಂದೆ ಅವರ ಆಟ ನಡೆಯುವುದಿಲ್ಲ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.

ಪಟ್ಟಣದ ಚನ್ನಕೇಶವಸ್ವಾಮಿ ದೇಗುಲದ ಮುಂಭಾಗ ಸೋಮವಾರ ಸಂಜೆ ವಿಶ್ವ ಹಿಂದು ಪರಿಷತ್, ಬಜರಂಗ ದಳದಿಂದ ದತ್ತಮಾಲಾ ಅಭಿಯಾನ ಮತ್ತು ದತ್ತ ಜಯಂತಿ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಬೈಕ್ ಜಾಥಾದ ಬಳಿಕ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ಹಿಂದುಗಳ ಆಸ್ತಿ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದೆ ಎಂದು ಈಗಾಗಲೇ ಸುಪ್ರೀಂಕೋರ್ಟ್ ಸ್ಪಷ್ಟ ಸಂದೇಶ ನೀಡಿದೆ. ಆದರೆ ದತ್ತ ಪೀಠದಲ್ಲಿನ ಒಂದೊಂದು ಕುಟುಂಬ ಅಲ್ಲಿರುವ 6 ಸಾವಿರ ಎಕರೆ ಭೂಮಿಯನ್ನು ಕಬಳಿಸುವ ಹುನ್ನಾರದಿಂದ ಇಲ್ಲಿ ಗೋರಿ ಇದೆ ಎಂದು ಜನರನ್ನು ನಂಬಿಸುತ್ತಾ ಬಂದಿದ್ದಾರೆ. ಆದರೆ ಅದಕ್ಕೆ ಯಾವುದೇ ದಾಖಲೆ ಇಲ್ಲ. ದತ್ತಪೀಠ ಹಿಂದುಗಳಿಗೆ ಸೇರಿದೆ ಎಂದು ಮೂಲ ದಾಖಲೆಗಳಿವೆ. ಮೈಸೂರು ಒಡೆಯರ್ ಸೇರಿ ಹತ್ತಾರು ರಾಜವಂಶಸ್ಥರು ಮತ್ತು ಮಠಗಳು ಇಲ್ಲಿಗೆ ನಡೆದುಕೊಂಡ ಬಂದ ನಿರ್ದೇಶನವಿದೆ ಎಂದರು.

ಹಿಂದು ಸಮಾಜ ಎಂದಿಗೂ ಕತ್ತಿ, ಗುರಾಣಿ ಹಿಡಿದು ಇನ್ನೊಂದು ಧರ್ಮದ ಮೇಲೆ ಯುದ್ಧ ಮಾಡಿಲ್ಲ. ಸರ್ವೇ ಜನ ಸುಖಿನೋಭವಂತು ಎಂಬ ಶಾಂತಿ ಸಂದೇಶವನ್ನು ಅಳವಡಿಸಿಕೊಂಡಿದೆ. ಆದರೆ ನಾವು ಹೇಡಿಗಳಲ್ಲ, ಹಿಂದುಗಳನ್ನು ವಿನಾಕಾರಣ ಕೆಣಕಿದರೆ ನೀವು ತಕ್ಕ ಪಾಠ ಕಲಿಯಲಿದ್ದೀರಿ ಎಂದು ಎಚ್ಚರಿಸಿದರು.

ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹಿಂದು ಧರ್ಮದ ಮೇಲೆ ಅನ್ಯರ ಅಟ್ಟಹಾಸ ಹೆಚ್ಚಿರುವುದು ನಿಜಕ್ಕೂ ಶೋಚನೀಯ. ಇಡೀ ವಿಶ್ವದಲ್ಲೇ ಹಿಂದು ಧರ್ಮ ಶಾಂತಿ ಮತ್ತು ಸಾಮರಸ್ಯದ ಬದುಕನ್ನು ಪ್ರತಿನಿಧಿಸುತ್ತದೆ. ಹಿಂದುಗಳು ಜಾಗೃತರಾಗುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಲು ಇಂತಹ ಕಾರ್ಯಕ್ರಮಗಳು ಪೂರಕವಾಗಲಿದೆ ಎಂದರು.

ಯಸಳೂರು ತೆಂಕಲಗೊಡು ಬೃಹನ್ಮಠದ ಶ್ರೀ ಚನ್ನಸಿದ್ದೇಶ್ವರ ಸ್ವಾಮೀಜಿ, ರಾಷ್ಟ್ರಧರ್ಮ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಸಂತೋಷ ಕೆಂಚಾಂಬ, ಜಿಲ್ಲಾ ಪ್ಲಾಂಟರ್ಸ್ ಕ್ಲಬ್ ಉಪಾಧ್ಯಕ್ಷ ಮಂಜುನಾಥ ಶೆಟ್ಟಿ, ವಿಶ್ವ ಹಿಂದು ಪರಿಷತ್ ವಿಭಾಗಿಯ ಕಾರ್ಯದರ್ಶಿ ಮಹಿಪಾಲ್, ತಾಲೂಕು ಅಧ್ಯಕ್ಷ ನಾಗೇಶ್, ಮುಖಂಡರಾದ ವಿಜಯ ಕುಮಾರ್, ಭರತ್, ಮೋಹನ್ ಇತರರು ಇದ್ದರು.
ಮಸೀದಿಯಲ್ಲಿ ಕುರ್‌ಆನ್ ಪಠಣ, ಚರ್ಚ್‌ನಲ್ಲಿ ಬೈಬಲ್ ಪ್ರಾರ್ಥನೆ ಮಾಡುವುದು ಸಾಮಾನ್ಯ. ಆದರೆ ಹಿಂದುಗಳಿಗೆ ಸಂಬಂಧಿಸಿದ ಇಲ್ಲಿನ ಶ್ರೀ ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಕುರ್‌ಆನ್ ಪಠಣ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಇದಕ್ಕೆ ಇಲ್ಲಿನ ಶಾಸಕರು ಬ್ರೇಕ್ ಹಾಕಿರುವುದು ಅಭಿನಂದನಾರ್ಹ.

* ಪ್ರಮೋದ್ ಮುತಾಲಿಕ್, ಅಧ್ಯಕ್ಷ, ಶ್ರೀರಾಮಸೇನೆ

ಹಿಂದು ಧರ್ಮದ ಆಚರಣೆಗಳನ್ನು ಕಡ್ಡಾಯವಾಗಿ ಪಾಲಿಸಿದರೆ ಮಾತ್ರ ಧರ್ಮ ಗಟ್ಟಿಯಾಗಿ ವಿಶ್ವದಲ್ಲೇ ಬಲಿಷ್ಠವಾಗಲಿ ಬೆಳೆಯಲು ಸಾಧ್ಯ. ನಾ ಹಿರಿದು, ನಾ ಕಿರಿದು ಎನ್ನದೇ ಜಾತಿ, ಮತ, ಪಂಥಗಳಿಂದ ದೂರ ಸರಿದು ಹಿಂದು ಧರ್ಮವನ್ನು ಉಳಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net