ಬೇಲೂರು ಬರಪೀಡಿತ ಪ್ರದೇಶ ಘೋಷಿಸದಕ್ಕೆ ಖಂಡನೆ

ಬೇಲೂರು ತಾಲೂಕನ್ನು ಬರ ಪೀಡಿತ ತಾಲೂಕೆಂದು ಘೋಷಿಸದೆ ಮಲತಾಯಿ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಬಸವೇಶ್ವರ ವೃತ್ತದಲ್ಲಿ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.ರೈತ ಮೋರ್ಚಾ ತಾಲೂಕು ಅಧ್ಯಕ್ಷ ದಿನೇಶ್ ಪೇಟೇಹಳ್ಳಿ, ಮುಖಂಡರಾದ ಸಿ.ಎಸ್.ಪ್ರಕಾಶ್, ರಂಗನಾಥ್, ಮಂಜುಳಾ, ರಮೇಶ್ ಸುವರ್ಣ, ಶೇಷಪ್ಪ ಇತರರಿದ್ದರು.
ಬೇಲೂರು ತಾಲೂಕನ್ನು ಬರ ಪೀಡಿತ ತಾಲೂಕೆಂದು ಘೋಷಿಸದೆ ಮಲತಾಯಿ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಬಸವೇಶ್ವರ ವೃತ್ತದಲ್ಲಿ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.ರೈತ ಮೋರ್ಚಾ ತಾಲೂಕು ಅಧ್ಯಕ್ಷ ದಿನೇಶ್ ಪೇಟೇಹಳ್ಳಿ, ಮುಖಂಡರಾದ ಸಿ.ಎಸ್.ಪ್ರಕಾಶ್, ರಂಗನಾಥ್, ಮಂಜುಳಾ, ರಮೇಶ್ ಸುವರ್ಣ, ಶೇಷಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಚ್.ಕೆ.ಸುರೇಶ್ ನೇತೃತ್ವದಲ್ಲಿ ಪ್ರತಿಭಟನೆ
  • ಬಸವೇಶ್ವರ ವೃತ್ತದಲ್ಲಿ ರಸ್ತೆ ಸಂಚಾರ ತಡೆದು ಹೋರಾಟ

ಬೇಲೂರು :

ತಾಲೂಕಿನಲ್ಲಿ ಮಳೆ ಇಲ್ಲದೆ ಬರಗಾಲದಿಂದ ರೈತರು ಬೆಳೆ ಕಳೆದುಕೊಂಡು ತತ್ತರಿಸಿ ಹೋಗಿದ್ದರೂ ರಾಜ್ಯ ಸರ್ಕಾರ ಬೇಲೂರು ತಾಲೂಕನ್ನು ಬರ ಪೀಡಿತ ತಾಲೂಕೆಂದು ಘೋಷಿಸದೆ ಮಲತಾಯಿ ಧೋರಣೆ ಅನುಸರಿಸಿದೆ ಎಂದು ಆರೋಪಿಸಿ ಶಾಸಕ ಎಚ್.ಕೆ.ಸುರೇಶ್ ನೇತೃತ್ವದಲ್ಲಿ ಶನಿವಾರ ಬಿಜೆಪಿ ಕಾರ್ಯಕರ್ತರು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ರಾಜ್ಯದಲ್ಲಿ ಬರಗಾಲ ಆವರಿಸಿದೆ. ಅದರಲ್ಲೂ ವಿಶೇಷವಾಗಿ ಹಾಸನ ಜಿಲ್ಲೆ ಬೇಲೂರು ತಾಲೂಕು ಮಲೆನಾಡು, ಅರೆ ಮಲೆನಾಡು ಬಯಲು ಸೀಮೆ ಹೊಂದಿದೆ. ಆದರೆ ಬರ ಪರಿಶೀಲನೆಗೆ ಬಂದ ತಂಡ ಸರ್ವೇ ಸರಿಯಾಗಿ ಮಾಡಿಲ್ಲ. ಈ ಮೂಲಕ ರೈತರಿಗೆ ಅನ್ಯಾಯ ಮಾಡಿದೆ ಎಂದು ಕಿಡಿಕಾರಿದರು.
ಬರದ ಬಗ್ಗೆ ಯಾರು ಸರ್ವೇ ಮಾಡಿದ್ದಾರೋ, ಯಾರು ವರದಿ ಕೊಟ್ಟಿದ್ದಾರೋ ಗೊತ್ತಿಲ್ಲ. ಸರ್ಕಾರ ಕೂಡಲೇ ಎಚ್ಚೆತ್ತು ಮರು ಸರ್ವೇ ಮಾಡಿಸಿ ತಾಲೂಕನ್ನು ಬರಪೀಡಿತ ತಾಲೂಕು ಅಂತ ಘೋಷಿಸಬೇಕು. ಇಲ್ಲದಿದ್ದಲ್ಲಿ ಬೇಲೂರು ಬಂದ್ ಮಾಡ ಬೇಕಾಗುತ್ತದೆ. ನೂತನ ಕೃಷಿ ಸಚಿವರು ಮತ್ತೆ ಬೇಲೂರಿನಲ್ಲಿ ಬರದ ಬಗ್ಗೆ ಸರ್ವೇ ಮಾಡಿಸಿ ಸತ್ಯಾಂಶ ತಿಳಿದು ತಾಲೂಕನ್ನು ಬರಪೀಡಿತ ಅಂತ ಘೋಷಣೆ ಮಾಡಬೇಕು ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಸಂಜಯ್ ಕೌರಿ ಮಾತನಾಡಿ, ವಾಡಿಕೆಗಿಂತ ಈ ಬಾರಿ 75 ರಷ್ಟು ಮಳೆ ಕಮ್ಮಿಯಾಗಿದೆ. ಈಗಾಗಲೇ ಮಳೆಗಾಲ ಅಂತ್ಯ ಆಗುವ ಕಾಲಕ್ಕೆ ಬಂದ್ರು ಇನ್ನು ಮಳೆಯಾಗಿಲ್ಲ. ಆದ್ರೂ ರಾಜ್ಯ ಸರ್ಕಾರ ಬೇಲೂರನ್ನು ಬರ ಪೀಡಿತ ಪಟ್ಟಿಯಿಂದ ಹೊರಗಿಟ್ಟಿದೆ. ಆದ್ರೆ ಪಕ್ಕದ ಸೋಮವಾರಪೇಟೆಯಲ್ಲಿ ಉತ್ತಮ ಮಳೆ ಆಗಿದ್ರು ಅದನ್ನು ಬರ ಪೀಡಿತವೆಂದು ಸೇರ್ಪಡೆ ಮಾಡಿದ್ದಾರೆ. ಇದರರ್ಥ ಬಿಜೆಪಿ ಶಾಸಕರು ಇರುವ ಕಡೆ ಸರ್ಕಾರ ಅನ್ಯಾಯ ಮಾಡ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಮಾಡುತ್ತಿದ್ದೇವೆ. ಬೇಲೂರಿನಲ್ಲಿ ರೈತರು, ಬೆಳೆಗಾರರು ಇರುವುದರಿಂದ ಈ ಒಂದು ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿಯಿಂದ ಬೇಲೂರು ಬಂದ್ ಕರೆ ಕೊಟ್ಟು ರೈತರ ತೆ ದೊಡ್ಡ ಮಟ್ಟದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದರು.
ರೈತ ಮೋರ್ಚಾ ತಾಲೂಕು ಅಧ್ಯಕ್ಷ ದಿನೇಶ್ ಪೇಟೇಹಳ್ಳಿ, ಮುಖಂಡರಾದ ಸಿ.ಎಸ್.ಪ್ರಕಾಶ್, ರಂಗನಾಥ್, ಮಂಜುಳಾ, ರಮೇಶ್ ಸುವರ್ಣ, ಶೇಷಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net