ಚೆನ್ನಮ್ಮ ಮಾತೃ ವಾತ್ಸಲ್ಯ ಚಿರಸ್ಮರಣೆ

ಪಟ್ಟಣದಲ್ಲಿ ಹಲವು ನಾಗರಿಕ ವೇದಿಕೆಗಳಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ಅಗಲಿಕೆಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಲಕ್ಷ್ಮಣ್, ಅಕ್ರಾಂತ್‌ರವಿಕುಮಾರ್, ಜೈಪ್ರಕಾಶ್, ಜಯಮ್ಮಾ ಇತರರಿದ್ದರು.
ಪಟ್ಟಣದಲ್ಲಿ ಹಲವು ನಾಗರಿಕ ವೇದಿಕೆಗಳಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ಅಗಲಿಕೆಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಲಕ್ಷ್ಮಣ್, ಅಕ್ರಾಂತ್‌ರವಿಕುಮಾರ್, ಜೈಪ್ರಕಾಶ್, ಜಯಮ್ಮಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಎಸ್. ಪುಟ್ಟಸ್ವಾಮಪ್ಪ ಅಭಿಪ್ರಾಯ
ಹೊಳೆನರಸೀಪುರ: ಮಾಜಿ ಪ್ರಧಾನಿ ಪತ್ನಿ ಆದರೂ ಹಮ್ಮು ಬಿಮ್ಮು ಮಾಡದೇ ಎಲ್ಲರನ್ನೂ ಆತ್ಮೀಯವಾಗಿ ಕಾಣುತ್ತಿದ್ದ ಮಾತೃ ವಾತ್ಯಲ್ಯವನ್ನು ಮರೆಯಲಾಗದು ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಎಸ್.ಪುಟ್ಟಸ್ವಾಮಪ್ಪ ತಿಳಿಸಿದರು.
ಪಟ್ಟಣದಲ್ಲಿ ಹಲವು ನಾಗರಿಕ ವೇದಿಕೆಗಳು ಅಯೋಜಿಸಿದ್ದ ಚೆನ್ನಮ್ಮ ಅವರ ಶ್ರದ್ಧ್ದಾಂಜಲಿ ಸಭೆಯಲ್ಲಿ ಮಾತನಾಡಿದರು. ಯಾರೇ ಮನೆಗೆ ಭೇಟಿ ನೀಡಿದರೂ ಅವರನ್ನು ಗುರುತಿಸಿ ಗೌರವಿಸುವ ಕಾರ್ಯ ಎಂದಿಗೂ ಅವರನ್ನು ಚಿರಸ್ಮರಣೀಯವಾಗಿ ಇಡುತ್ತದೆ. ದೇಹ ತ್ಯಜಿಸಿದ್ದರೂ ಅವರ ಆತ್ಮ ಸ್ವರ್ಗಸ್ಥವಾಗಲಿ, ಅವರ ಅಗಲಿಕೆಯಿಂದ ದೇವೇಗೌಡರ ಕುಟುಂಬಕ್ಕೆ ದುಖಃ ತಡೆಯುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಬೇಡಿದರು.
2 ನಿಮಿಷ ಮೌನ ಆಚರಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿಕೋರಲಾಯಿತು.
ಜೆಡಿಎಸ್ ಮುಖಂಡ ಲಕ್ಷ್ಮಣ್, ಅಕ್ರಾಂತ್‌ರವಿಕುಮಾರ್, ಜೈಪ್ರಕಾಶ್, ಜಯಮ್ಮ್ಮಾ, ದೊಡ್ಡಮಲ್ಲಣ್ಣ, ಟಿ.ಎಂ.ಗಿರೀಶ್, ಜಗನ್ನಾಥ್ ಹಾಗೂ ಮುರಳಿಧರ್ ಸೇರಿದಂತೆ ಹಲವರು ಭಾಗಿಯಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net