ಈ ನಡುವೆ ರಫ್ತುದಾರರ ಕೊರತೆ ಸಹ ಬೆಲೆ ಇಳಿಕೆಗೆ ಕಾರಣ ಎಂಬ ಮಾತಿದ್ದರೆ, ಮತ್ತೊಂದೆಡೆ ಜಾಗತಿಕವಾಗಿ ಹೆಚ್ಚು ಕಾಫಿ ಬೆಳೆಯುವ ದೇಶಗಳಾದ ಇಂಡೊನೇಷಿಯಾ, ವಿಯಟ್ನಾಂನಲ್ಲಿ ಕಳೆದ ಅರ್ಧ ದಶಕದಿಂದ ಪ್ರಾಕೃತಿಕ ವಿಕೋಪದಿಂದ ಈ ದೇಶಗಳಲ್ಲಿ ಕಾಫಿ ಗಣನೀಯವಾಗಿ ಕುಸಿತ ಕಂಡಿತ್ತು. ಇದೇ ಕಾರಣಕ್ಕೆ ಭಾರತದ ಕಾಫಿಗೆ ಚಿನ್ನದಂತಹ ಬೆಲೆ ಬಂದಿದೆ. ಆದರೆ, ಈ ಬಾರಿ ಈ ದೇಶಗಳಲ್ಲಿ ಕಾಫಿ ಉತ್ಪಾದನೆ ಹೆಚ್ಚಿದ್ದು ಭಾರತದಲ್ಲಿ ಕಾಫಿ ಕೊಯ್ಲು ನಡೆಸುವ ವೇಳೆಯೆ ಹೆಚ್ಚು ಕಾಫಿ ಬೆಳೆಯುವ ದೇಶಗಳಲ್ಲೂ ಕಾಫಿ ಕೊಯ್ಲಿಗೆ ಬಂದಿದೆ. ಇದೇ ಕಾರಣಕ್ಕೆ ಮಾರುಕಟ್ಟೆ ಕುಸಿತಗೊಂಡಿದೆ. ಅಲ್ಲದೆ ರಫ್ತುದಾರರು ಕಡಿಮೆ ದರಕ್ಕೆ ದೊರಕುವ ಇತರ ದೇಶದ ಕಾಫಿಯನ್ನು ಬಿಟ್ಟು ಭಾರತದ ಮಾರುಕಟ್ಟೆಗೆ ಆಗಮಿಸುತ್ತಿಲ್ಲ ಎಂಬ ಮಾತಿದೆ.