ಪರಿಸರ ಇಂಜಿನಿಯರ್ ರವಿಕುಮಾರ್ ಮಾತನಾಡಿ, ಜನಪರ ಕಾಳಜಿ ಅರಿತು ನಗರದ ನೈರ್ಮಲ್ಯ ಕಾಪಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಕಸ ಸಂಗ್ರಹಿಸಲು ಬರುವ ಸಿಬ್ಬಂದಿಗೆ ನೀಡುವ ವೇತನ, ಡೀಸೆಲ್ ಸೇರಿದಂತೆ ಖರ್ಚು, ವೆಚ್ಚ ದುಬಾರಿಯಾಗಿದೆ.ನಿಮ್ಮೆಲ್ಲರ ಹೊಂದಾಣಿಕೆ ಹಾಗೂ ಸಹಕಾರ ಅಗತ್ಯವಿದ್ದು ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು ಎಂದು ಹೇಳಿದರು.