ವಯೋವೃದ್ಧರಿಗೆ, ಅನಾಥ ಮಕ್ಕಳಿಗೆ, ರೈತರು ಸಂಶೋಧನೆ ಮಾಡುವ ಕೇಂದ್ರ, ಸಂಸ್ಕೃತ ಪಾಠಶಾಲೆ ನಿರ್ಮಾಣ ಸೇರಿ ಹಲವು ಯೋಜನೆಗಳನ್ನು ಕಾರ್ಯಗತ ಮಾಡಲಾಗುವುದು. ಈ ಕೆಲಸಕ್ಕಾಗಿ ಸ್ವಾರ್ಥವಿಲ್ಲದೆ ಧಾರ್ಮಿಕವಾಗಿ, ಸಾಮಾಜಿಕವಾಗಿ ಕೆಲಸ ಮಾಡುವವರನ್ನು ಆಯ್ಕೆ ಮಾಡಲಾಗವುದು. ಈ ಭೂಮಿ ಇರುವವರೆಗೂ ನಮ್ಮ ತಂದೆ-ತಾಯಿ ಹೆಸರಿನಲ್ಲಿ ಬಡವರು, ಅನಾಥರಿಗೆ ನೆರಳಾಗುವ, ಬದುಕಿಗೆ ದಾರಿ ತೋರಿಸುವ ಯೋಜನೆ ಅನುಷ್ಠಾನಕ್ಕೆ ನೀಲಿನಕ್ಷೆ ತಯಾರು ಮಾಡಿದ್ದೇವೆ. ಮುಂದಿನ 15 ರಿಂದ 20 ದಿನಗಳಲ್ಲಿ ಕಾಮಗಾರಿ ಆರಂಭಿಸಿ ಮುಂದಿನ ಮೂರು ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿ ಹಾಕಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.