ಚೆಲುವೇಗೌಡನ ಕೊಪ್ಪಲು ರಸ್ತೆ ಕಾಮಗಾರಿಗೆ ಚಾಲನೆ

ಬೇಲೂರು ತಾಲೂಕಿನ ಮಾಳೆಗೆರೆ ಗ್ರಾಮದ ಸಮೀಪವಿರುವ ಚಲುವೇಗೌಡನ ಕೊಪ್ಪಲು ಗ್ರಾಮದ ರಸ್ತೆ ಕಾಮಗಾರಿಗೆ ಶಾಸಕ ಎಚ್.ಕೆ.ಸುರೇಶ್ ಭೂಮಿ ಪೂಜೆ ನೆರವೇರಿಸಿದರು. ಸಂಗಪ್ಪ, ಶೇಷಪ್ಪ, ಮುಖಂಡರಾದ ಶಿವಕುಮಾರ್, ಮಲ್ಲೇಶಗೌಡ, ಈಶ್ವರ್, ರಘು, ಸುಂಟಿ ರಘು, ವೀರು ಇತರರಿದ್ದರು.
ಬೇಲೂರು ತಾಲೂಕಿನ ಮಾಳೆಗೆರೆ ಗ್ರಾಮದ ಸಮೀಪವಿರುವ ಚಲುವೇಗೌಡನ ಕೊಪ್ಪಲು ಗ್ರಾಮದ ರಸ್ತೆ ಕಾಮಗಾರಿಗೆ ಶಾಸಕ ಎಚ್.ಕೆ.ಸುರೇಶ್ ಭೂಮಿ ಪೂಜೆ ನೆರವೇರಿಸಿದರು. ಸಂಗಪ್ಪ, ಶೇಷಪ್ಪ, ಮುಖಂಡರಾದ ಶಿವಕುಮಾರ್, ಮಲ್ಲೇಶಗೌಡ, ಈಶ್ವರ್, ರಘು, ಸುಂಟಿ ರಘು, ವೀರು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಚ್.ಕೆ.ಸುರೇಶ್‌ರಿಂದ ಭೂಮಿ ಪೂಜೆ
ಬೇಲೂರು: ತಾಲೂಕಿನ ಚೆಲುವೇಗೌಡನ ಕೊಪ್ಪಲು ಗ್ರಾಮದ ರಸ್ತೆ ಸಾಕಷ್ಟು ವರ್ಷಗಳಿಂದ ಅಭಿವೃದ್ಧಿಯಾಗದೆ ಜನರು ಓಡಾಡಲು ತೊಂದರೆಯಾಗುತ್ತಿತ್ತು. ಇದನ್ನು ಗಮನಿಸಿ ಕೆಲವೇ ಮನೆಗಳಿದ್ದರೂ ಅವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರಸ್ತೆ ಕೆಲಸ ಮಾಡಿಸಲಾಗುತ್ತಿದೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ತಾಲೂಕಿನ ಮಾಳೆಗೆರೆ ಗ್ರಾಮದ ಸಮೀಪದ ಚಲುವೇಗೌಡನ ಕೊಪ್ಪಲು ಗ್ರಾಮದ ರಸ್ತೆ ಕಾಮಗಾರಿಗೆ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಕೋಗಿಲಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಳೆಗೆರೆ ಗ್ರಾಮ ಹಾಗೂ ಚಲುವೇಗೌಡನ ಕೊಪ್ಪಲಿಗೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿತ್ತು. ಈ ಭಾಗದ ಗ್ರಾಮಸ್ಥರ ಬೇಡಿಕೆಯಂತೆ ರಸ್ತೆ ಕಾಮಗಾರಿಗೆ ಎತ್ತಿನಹೊಳೆ ಯೋಜನೆಯಿಂದ ಹಣ ಬಿಡುಗಡೆಯಾಗಿದ್ದು, ಅದರಲ್ಲಿ ಕಾಂಕ್ರೀಟ್ ರಸ್ತೆ ಮಾಡಲಿದ್ದೇವೆ. ಜತೆಗೆ ಈ ಗ್ರಾಮದಲ್ಲಿ ಕೇವಲ ನಾಲ್ಕೈದು ಕುಟುಂಬ ಇರುವ ಕಾರಣ ಯಾರೂ ಇತ್ತ ಗಮನ ಹರಿಸಿರಲಿಲ್ಲ. ಆದರೆ ಚುನಾವಣೆ ಸಂದರ್ಭ ನಾನು ಮಾತು ಕೊಟ್ಟಿದ್ದೆ. ಅದನ್ನು ಈಗ ಈಡೇರಿಸುತ್ತಿದ್ದೇನೆ. ಮುಂದೆಯೂ ಮೂಲ ಸೌಕರ್ಯ ಕಲ್ಪಿಸುತ್ತೇನೆ ಎಂದರು.
ಕೋಗಿಲಮನೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಂಗಪ್ಪ, ಶೇಷಪ್ಪ, ಮುಖಂಡರಾದ ಶಿವಕುಮಾರ್, ಮಲ್ಲೇಶಗೌಡ, ಈಶ್ವರ್, ರಘು, ಸುಂಟಿ ರಘು, ವೀರು ಸೇರಿದಂತೆ ಗ್ರಾಮಸ್ಥರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net