ದೊಡ್ಡಮ್ಮದೇವಿ, ಚಿಕ್ಕಮ್ಮದೇವಿ ರಥೋತ್ಸವ

ಗಂಡಸಿ ಗ್ರಾಮದಲ್ಲಿ ದೊಡ್ಡಮ್ಮದೇವಿ, ಚಿಕ್ಕಮ್ಮದೇವಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಗಂಡಸಿ ಗ್ರಾಮದಲ್ಲಿ ದೊಡ್ಡಮ್ಮದೇವಿ, ಚಿಕ್ಕಮ್ಮದೇವಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
Published on
ಗಂಡಸಿ: ಗಂಡಸಿ ಗ್ರಾಮದಲ್ಲಿ ಸೋಮವಾರ ದೊಡ್ಡಮ್ಮದೇವಿ, ಶ್ರೀಚಿಕ್ಕಮ್ಮದೇವಿ ಮಹಾರಥೋತ್ಸವ ಅದ್ದೂರಿಯಾಗಿ ನಡೆಯಿತು.
ಸುಡುವ ಬಿಸಿಲ ಬೇಗೆಯನ್ನು ಲೆಕ್ಕಿಸದೆ ಸಹಸ್ರಾರು ಭಕ್ತರು ಸೋಮವಾರ ರಥೋತ್ಸವವನ್ನು ಕಣ್ತುಂಬಿಕೊಂಡರು.
ಗ್ರಾಮದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಶುಕ್ರವಾರದಿಂದ ಸೋಮವಾರದವರೆಗೆ ನಾಲ್ಕು ದಿನಗಳ ಕಾಲ ಶ್ರೀದೇವಿಯವರ ದೇವಾಲಯದ ಆವರಣದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಸೋಮವಾರ ರಥಕ್ಕೆ ಬಲಿಪ್ರದಾನ, ಇತರ ಧಾರ್ಮಿಕ ಪೂಜಾ ಕೈಂಕರ್ಯ ನೆರವೇರಿಸಿ ಮಧ್ಯಾಹ್ನ 12 ಗಂಟೆಗೆ ಶ್ರೀ ದೊಡ್ಡಮ್ಮದೇವಿ, ಶ್ರೀ ಚಿಕ್ಕಮ್ಮದೇವಿ ಅವರ ಉತ್ಸವ ಮೂರ್ತಿ ಮತ್ತು ರಥಕ್ಕೆ ವಿವಿಧ ಬಗೆಯ ಪುಷ್ಪಗಳಿಂದ ಶೃಂಗಾರ ಮಾಡಿ ರಥದ ಮೇಲೆ ಉತ್ಸವಮೂರ್ತಿಗಳನ್ನು ಕೂರಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಅರೇವಾದ್ಯ, ಮಂಗಳವಾದ್ಯ ಸೋಮನ ಕುಣಿತದೊಂದಿಗೆ ಜಾತ್ರಾ ಮೈದಾನದಿಂದ ಆಂಜನೇಯ ದೇವಾಲಯದವರೆಗೆ ಭಕ್ತರು ರಥವನ್ನು ಎಳೆಯುವ ಮೂಲಕ ಸಂಭ್ರಮಿಸಿದರು. ರಥಕ್ಕೆ ಹಣ್ಣು-ದವನ ಎಸೆದು ತಮ್ಮ ಇಷ್ಟಾರ್ಥ ಕರುಣಿಸುವಂತೆ ಬೇಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net