ಪ್ರತಿಮಾ ಟ್ರಸ್ಟ್‌ನಿಂದ ದೇಸಿ ಕಲೆ, ಸಂಸ್ಕೃತಿ ಉಳಿವು

ಪ್ರತಿಮಾ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪಟ್ಟಣದ ನೂತನ ಕೆಪಿಎನ್ ಶಾಲೆಯ ಸಹಯೋಗದಲ್ಲಿ ಆಯೋಜಿಸಿದ್ದ ವಾರ್ಷಿಕ ಶಿಬಿರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿದರು. ನೇತ್ರಾವತಿ, ಕೆ.ಎನ್.ಅನಿಲ್, ಎಚ್.ಎಚ್.ಸತೀಶ್ ಮತ್ತಿತರರಿದ್ದರು.
ಪ್ರತಿಮಾ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪಟ್ಟಣದ ನೂತನ ಕೆಪಿಎನ್ ಶಾಲೆಯ ಸಹಯೋಗದಲ್ಲಿ ಆಯೋಜಿಸಿದ್ದ ವಾರ್ಷಿಕ ಶಿಬಿರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿದರು. ನೇತ್ರಾವತಿ, ಕೆ.ಎನ್.ಅನಿಲ್, ಎಚ್.ಎಚ್.ಸತೀಶ್ ಮತ್ತಿತರರಿದ್ದರು.
Published on
ಚನರಾಯಪಟ್ಟಣ: ದೇಸಿ ಕಲೆ ಮತ್ತು ಸಂಸ್ಕೃತಿಗಳನ್ನು ಪುನರುತ್ಥಾನಗೊಳಿಸುವ ನಿಟ್ಟಿನಲ್ಲಿ ಪಟ್ಟಣದ ಪ್ರತಿಮಾ ಟ್ರಸ್ಟ್ ನಿರಂತರ ಶ್ರಮಿಸುತ್ತಿದ್ದು, ಅವರನ್ನು ಪ್ರೋತ್ಸಾಹಿಸುವ ಮನಸ್ಸುಗಳು ಹೆಚ್ಚಾಗಬೇಕೆಂದು ಶಾಸಕ ಸಿ.ಎನ್.ಬಾಲಕೃಷ್ಣ ಆಶಿಸಿದರು.
ಪ್ರತಿಮಾ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪಟ್ಟಣದ ನೂತನ ಕೆಪಿಎನ್ ಶಾಲೆಯ ಸಹಯೋಗದಲ್ಲಿ ಶಿವಜ್ಯೋತಿ ಕಲ್ಯಾಣಮಂಟಪದಲ್ಲಿ ಆಯೋಜಿಸಿದ್ದ ವಾರ್ಷಿಕ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಪ್ರತಿಮಾ ಟ್ರಸ್ಟ್ ಮೂಲಕ ಡೊಳ್ಳು ಕುಣಿತದ ತಂಡವನ್ನು ಕಟ್ಟಲು ಅದಕ್ಕೆ ಅಗತ್ಯವಿರುವ ಪರಿಕರಗಳನ್ನು ಕೊಡಿಸುವ ಭರವಸೆ ನೀಡಿದರು.
ಮುಂದಿನ ಪೀಳಿಗೆಗೆ ನಮ್ಮ ಕೊಡುಗೆ ಇರಬೇಕು. ಎಲ್ಲ ಕಲೆಗಳ ಮೂಲವಾದ ಜನಪದ ಕಲೆಗಳನ್ನು ಘೋಷಿಸುವ ಮೂಲಕ ನಮ್ಮ ಕರ್ತವ್ಯವನ್ನು ಪ್ರತಿಯೊಬ್ಬರೂ ಮಾಡಬೇಕು, ಯಾವುದೇ ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಜನಪದ ವಾದ್ಯ ಕಲೆಗಳನ್ನು ಪ್ರೋತ್ಸಾಹಿಸಲು ಸರ್ಕಾರದ ವಿವಿಧ ಇಲಾಖೆಗಳು ಪ್ರಾಮಾಣಿಕವಾಗಿ ಮುಂದಾಗಬೇಕು. ಕನ್ನಡ ರಾಜ್ಯೋತ್ಸವ ಪುರಸ್ಕಾರಕ್ಕೆ ಪ್ರತಿಮಾ ಟ್ರಸ್ಟ್ ಅರ್ಹವಾಗಿದೆ ಎಂದರು.
ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ತಮಟೆ ವಾದನವನ್ನು ಅಭ್ಯಾಸ ಮಾಡಿ ನುಡಿಸುವುದನ್ನು ಕಂಡ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿ, ಕಲೆ ಎನುವುದು ಸೀಮಿತವಾದುದಲ್ಲ, ಅದು ಸಮಾಜದ ಆಸ್ತಿಯಾಗಿದೆ. ಸಮಾಜಕ್ಕೆ ಹತ್ತಿರವಿರುವ ನಿಟ್ಟಿನಲ್ಲಿ ಎಲ್ಲ ಕಲೆಗಳ ಪ್ರಚಾರವಾಗಬೇಕೇಂದ ಅವರು, ಸರ್ಕಾರಿ ಶಾಲಾ -ಕಾಲೇಜುಗಳಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ಅದ್ಯತೆ ನೀಡುವುದಾಗಿ ತಿಳಿಸಿದರು.
ತಾಲೂಕಿನ ನುಗ್ಗೇಹಳ್ಳಿ, ಬಾಗೂರು, ಶ್ರವಣಬೆಳಗೊಳದಲ್ಲಿ ಕೆಪಿಎಸ್ ಶಾಲೆಯಿದ್ದು ನಾಲ್ಕನೇ ಶಾಲೆಯಾಗಿ ಪೇಟೆ ಸರ್ಕಾರಿ ಪ್ರೌಢಶಾಲೆಯನ್ನು ಘೋಷಿಸಲಾಗಿದೆ. ಅದಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಮುಂದಾಗಬೇಕು. ಇಂತಹ ದೇಸಿ ಕಲೆಗಳ ಆಸಕ್ತರಾಗುವ ವಿದ್ಯಾರ್ಥಿಗಳು ತಮ್ಮ ಕ್ರಿಯಾಶೀಲತೆಯನ್ನು ಇನ್ನಷ್ಟು ಹಚ್ಚಿಸಿಕೊಳ್ಳಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕಿ ನೇತ್ರಾವತಿ ಮಾತನಾಡಿ, ನಮ್ಮ ಮಕ್ಕಳಿಗೆ ಜನಪದ ಸೊಗಡಿನ ಪರಿಚಯ ಮಾಡುತ್ತಿರುವುದು ಸಂತಸವಾಗಿದ್ದು, ಮಕ್ಕಳು ಇದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು, ಈ ಮೂಲಕ ಮೊಬೈಲ್ ಗೀಳನ್ನು ದೂರ ಮಾಡಲು ಸಾಧ್ಯವಿದೆ ಎಂದರು.
ಬಿಆರ್‌ಸಿ ಕೆ.ಎನ್.ಅನಿಲ್ ಮಾತನಾಡಿದರು.
ಕ್ಷೇತ್ರಶಿಕ್ಷಣಾಧಿಕಾರಿ ಎಚ್.ಎಚ್.ಸತೀಶ್, ಇಸಿಒ ಶ್ರೀನಿವಾಸ್, ನಾಗೇಂದ್ರ, ಗಾಣಿಕರ ಸಂಘದ ಅಧ್ಯಕ್ಷ ಸಿ.ಬಿ.ಸುಬ್ರಹ್ಮಣ್ಣ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾವ್ಯದರ್ಶಿ ದೇವರಾಜೇಗೌಡ, ಪ್ರತಿ ಮಾಟ್ರಸ್ಟ್ ಅಧ್ಯಕ್ಷ ಉಮೇಶ್ ತಂಕನಹಳ್ಳಿ, ಕಾರ್ಯದರ್ಶಿ ಡಿ.ಜಗದೀಶ್ಚಂದ್ರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net