ಅಕ್ರಮ-ಸಕ್ರಮ ನೋಂದಣಿ ಮಾಡಿಸಿಕೊಳ್ಳಿ

ನುಗ್ಗೇಹಳ್ಳಿ ಹೋಬಳಿ ಕೇಂದ್ರದ ಸೆಸ್ಕ್ ಉಪ ವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಭೂಮಿಪೂಜೆ ನೆರವೇರಿಸಿದರು. ವಜ್ರಕುಮಾರ್, ಮಹಾದೇವ್, ಚೆಲುವರಾಜ್, ಚೈತ್ರಾ, ನವೀನ್, ದೊರೆಸ್ವಾಮಿ, ನಾಗರಾಜು, ಪುಟ್ಟಸ್ವಾಮಿ, ಮುರಳಿ, ಕುಮಾರ್, ಕೃಪಾಶಂಕರ್, ನಟರಾಜ್ ಇದ್ದರು.
ನುಗ್ಗೇಹಳ್ಳಿ ಹೋಬಳಿ ಕೇಂದ್ರದ ಸೆಸ್ಕ್ ಉಪ ವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಭೂಮಿಪೂಜೆ ನೆರವೇರಿಸಿದರು. ವಜ್ರಕುಮಾರ್, ಮಹಾದೇವ್, ಚೆಲುವರಾಜ್, ಚೈತ್ರಾ, ನವೀನ್, ದೊರೆಸ್ವಾಮಿ, ನಾಗರಾಜು, ಪುಟ್ಟಸ್ವಾಮಿ, ಮುರಳಿ, ಕುಮಾರ್, ಕೃಪಾಶಂಕರ್, ನಟರಾಜ್ ಇದ್ದರು.
Published on
ನುಗ್ಗೇಹಳ್ಳಿ: ಕೃಷಿ ಪಂಪ್‌ಸೆಟ್‌ಗಳ ಅಕ್ರಮ-ಸಕ್ರಮ ಯೋಜನೆಗೆ ರೈತರು ಹಣ ಕಟ್ಟಿ ನೋಂದಣಿ ಮಾಡಿಸಿಕೊಳ್ಳಿ. ಇದರಿಂದ ಸಮರ್ಪಕವಾಗಿ ವಿದ್ಯುತ್ ಪಡೆಯಬಹುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಹೋಬಳಿ ಕೇಂದ್ರದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ನುಗ್ಗೇಹಳ್ಳಿ ಉಪ ವಿಭಾಗ ಕಚೇರಿ ವ್ಯಾಪ್ತಿಯ ಬಾಗೂರು, ಹಿರೀಸಾವೆ ಹೋಬಳಿಯಲ್ಲಿ ಹೆಚ್ಚು ಕೊಳವೆ ಬಾವಿಗಳಿವೆ. ರೈತರು ಹಣ ಪಾವತಿಸಿ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಿಕೊಳ್ಳಿ ಎಂದು ತಿಳಿಸಿದರು.
ತಾಲೂಕಿನ ರೈತರಿಗೆ ಗುಣಮಟ್ಟದ ವಿದ್ಯುತ್ ನೀಡುವ ಉದ್ದೇಶದಿಂದ ಹೋಬಳಿಯ ತೆಂಕನಹಳ್ಳಿ ಬಳಿ 220 ಕೆವಿ ರಿಸೀವಿಂಗ್ ಸ್ಟೇಷನ್‌ಗೆ ಮಂಜೂರಾತಿ ದೊರೆತಿದ್ದು ಸದ್ಯದಲ್ಲೇ ಭೂಮಿಪೂಜೆ ನೆರವೇರಿಸಲಾಗುವುದು. ಕೇಂದ್ರ, ರಾಜ್ಯ ಸರ್ಕಾರಗಳ ಪ್ರಮುಖ ಯೋಜನೆಯಾದ ಕುಸುಮ್ ಬಿ ಯೋಜನೆಯಿಂದ ರೈತರಿಗೆ ಗುಣಮಟ್ಟದ ವಿದ್ಯುತ್ ನಿರಂತರವಾಗಿ ದೊರೆಯುತ್ತದೆ. ಕೇಂದ್ರ, ರಾಜ್ಯ ಸರ್ಕಾರಗಳು ಶೇ.80 ಸಹಾಯಧನ ನೀಡಲಿದ್ದು ರೈತರು ಶೇ.20 ಹಣ ಪಾವತಿಸಬೇಕು. ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಇದರ ಲಾಭ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಚ್.ಡಿ.ವಜ್ರಕುಮಾರ್, ಸಹಾಯಕ ಇಂಜಿನಿಯರ್ ಮಹಾದೇವ್, ಕಾಮಗಾರಿ ಇಂಜಿನಿಯರ್ ಚೆಲುವರಾಜ್, ತಾಂತ್ರಿಕ ವಿಭಾಗದ ಇಂಜಿನಿಯರ್ ಚೈತ್ರಾ, ಮುಖಂಡರಾದ ನವೀನ್, ಬಿ.ಆರ್.ದೊರೆಸ್ವಾಮಿ, ಪಟೇಲ್ ಕುಮಾರ್, ಎನ್.ಆರ್.ಮುರಳಿ, ಕೃಪಾಶಂಕರ್, ಸುರೇಶ್, ಗಿರೀಶ್, ಸಂಪತ್ ಕುಮಾರ್, ಮಂಜುನಾಥ್, ಮಹಮ್ಮದ್ ಜಾವೇದ್, ನಟರಾಜ್, ಕೆಂಪೇಗೌಡ, ಹೊನ್ನೇಗೌಡ, ಬೆಟ್ಟಯ್ಯ, ಯಲ್ಲಪ್ಪ, ಎನ್.ಆರ್.ಶಿವಕುಮಾರ್, ಎನ್.ಆರ್. ಚಂದ್ರಶೇಖರ್, ಮಂಜಣ್ಣ, ವಿರುಪಾಕ್ಷಿಪುರ ಗೋಪಾಲ್, ಗಂಗಣ್ಣ, ದಿನೇಶ್, ಬಾಬು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net