ಶಿಬಿರಗಳು ಆರೋಗ್ಯ ಸ್ಥಿತಿ ಅರಿಯಲು ಸಹಕಾರಿ

ಮಹಾನಗರ ಪಾಲಿಕೆ ಸಿಬ್ಬಂದಿ ಹಾಗೂ ಪೌರಕಾರ್ಮಿಕರಿಗೆ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. ಪಾಲಿಕೆ ಆಯುಕ್ತ ಕೃಷ್ಣಮೂರ್ತಿ, ಹೆಮ್ಮಿಗೆ ಮೋಹನ್, ಡಾ.ವೈ.ಎಸ್.ವೀರಭದ್ರಪ್ಪ, ಉದಯ್‌ಕುಮಾರ್, ಪಾಲಿಕೆ ಇಂಜಿನಿಯರ್ ಸತ್ಯನಾರಾಯಣ್ ಇತರರಿದ್ದರು.
ಮಹಾನಗರ ಪಾಲಿಕೆ ಸಿಬ್ಬಂದಿ ಹಾಗೂ ಪೌರಕಾರ್ಮಿಕರಿಗೆ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. ಪಾಲಿಕೆ ಆಯುಕ್ತ ಕೃಷ್ಣಮೂರ್ತಿ, ಹೆಮ್ಮಿಗೆ ಮೋಹನ್, ಡಾ.ವೈ.ಎಸ್.ವೀರಭದ್ರಪ್ಪ, ಉದಯ್‌ಕುಮಾರ್, ಪಾಲಿಕೆ ಇಂಜಿನಿಯರ್ ಸತ್ಯನಾರಾಯಣ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • health status.
ಹಾಸನ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಹಾಸನ ಹಾಗೂ ಮಹಾನಗರ ಪಾಲಿಕೆ ಆಶ್ರಯದಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಗುರುವಾರ ಮಹಾನಗರ ಪಾಲಿಕೆ ಸಿಬ್ಬಂದಿ ಹಾಗೂ ಪೌರಕಾರ್ಮಿಕರಿಗೆ ಆರೋಗ್ಯ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಪಾಲಿಕೆ ಆಯುಕ್ತ ಕೃಷ್ಣಮೂರ್ತಿ ಶಿಬಿರ ಉದ್ಘಾಟಿಸಿ ಮಾತನಾಡಿ, ಮಹಾನಗರ ಪಾಲಿಕೆ ಸಿಬ್ಬಂದಿ ದಿನನಿತ್ಯದ ಕೆಲಸದ ಒತ್ತಡ ಮತ್ತು ಅನಿಯಮಿತ ಜೀವನ ಶೈಲಿಯಿಂದ ತಮ್ಮ ಆರೋಗ್ಯದ ಕಡೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಆರೋಗ್ಯ ತಪಾಸಣಾ ಶಿಬಿರಗಳು ಅವರ ಆರೋಗ್ಯ ಸ್ಥಿತಿಯನ್ನು ಅರಿಯಲು ಮತ್ತು ತಕ್ಷಣದ ಚಿಕಿತ್ಸೆ ಪಡೆಯಲು ಸಹಕಾರಿಯಾಗಿದೆ ಎಂದರು.
ಶಿಬಿರದಲ್ಲಿ ವಿ ಕೇರ್ ಆಸ್ಪತ್ರೆ ವತಿಯಿಂದ ದಂತ ತಪಾಸಣೆ, ಸುನಂದ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ವತಿಯಿಂದ ನೇತ್ರ ತಪಾಸಣೆ, ಹಾಸನ ರಕ್ತನಿಧಿ ಕೇಂದ್ರದ ವತಿಯಿಂದ ರಕ್ತ ಗುಂಪು ಪರೀಕ್ಷೆ, ಹಿಮೋಗ್ಲೋಬಿನ್ ತಪಾಸಣೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎನ್‌ಸಿಡಿ ತಂಡದ ವತಿಯಿಂದ ಬಿ.ಪಿ., ಶುಗರ್-ತಪಾಸಣೆ ಮತ್ತು ಡಾ.ಚಂದನ್ ಅವರಿಂದ ಸಾಮಾನ್ಯ ಕಾಯಿಲೆಗಳ ತಪಾಸಣೆ ನಡೆಸಲಾಯಿತು.
ಶಿಬಿರದಲ್ಲಿ 156ಕ್ಕೂ ಹೆಚ್ಚಿನ ಮಹಾನಗರ ಪಾಲಿಕೆ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಆರೋಗ್ಯ ತಪಾಸಣೆಗೆ ಒಳಪಟ್ಟರು.
ರೆಡ್ ಕ್ರಾಸ್ ಸಂಸ್ಥೆಯ ಪ್ರಾಂತಪಾಲ ಹೆಮ್ಮಿಗೆ ಮೋಹನ್, ಡಾ.ವೈ.ಎಸ್.ವೀರಭದ್ರಪ್ಪ, ಉದಯ್‌ಕುಮಾರ್, ಪಾಲಿಕೆ ಇಂಜಿನಿಯರ್ ಸತ್ಯನಾರಾಯಣ್, ಜಯೇಂದ್ರಕುಮಾರ್, ಅಮ್ಜದ್ ಖಾನ್, ಜಯಪ್ರಕಾಶ್, ಡಾ.ರಂಗಲಕ್ಷ್ಮೀ, ಭೀಮರಾಜ್, ಕೆ.ಟಿ ಜಯಶ್ರೀ, ಅವಿನಾಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net