ವೀರಾಂಜನೇಯಸ್ವಾಮಿಗೆ ಬೆಣ್ಣೆ ಅಲಂಕಾರ ಪೂಜೆ

ಹೊನ್ನಕುಮಾರನಹಳ್ಳಿ ಗ್ರಾಮದ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಹನುಮದ್ ವ್ರತ ಪ್ರಯುಕ್ತ ಭಾನುವಾರ ಬೆಣ್ಣೆ ಅಲಂಕಾರ ಮಾಡಲಾಗಿತ್ತು.
ಹೊನ್ನಕುಮಾರನಹಳ್ಳಿ ಗ್ರಾಮದ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಹನುಮದ್ ವ್ರತ ಪ್ರಯುಕ್ತ ಭಾನುವಾರ ಬೆಣ್ಣೆ ಅಲಂಕಾರ ಮಾಡಲಾಗಿತ್ತು.
Published on

ಪ್ರಮುಖ ಮುಖ್ಯಾಂಶಗಳು

  • ಬೆಣ್ಣೆ ಅಲಂಕಾರ ಪೂಜೆ
  • ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ
ಗಂಡಸಿ: ಹನುಮದ್ ವ್ರತ ಪ್ರಯುಕ್ತ ಹೊನ್ನಕುಮಾರನಹಳ್ಳಿ ಗ್ರಾಮದ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ವಿಶೇಷ ಪೂಜೆ ನೆರವೇರಿಸಲಾಯಿತು.
ಶ್ರೀರಾಮ ಭಕ್ತ ಶ್ರೀ ವೀರಾಂಜನೇಯಸ್ವಾಮಿ ವಿಗ್ರಹಕ್ಕೆ ಬೆಣ್ಣೆ ಅಲಂಕಾರ ಮಾಡಿ ಪೂಜಾ ಕೈಂಕರ್ಯ ನೆರವೇರಿಸಿ ಮಹಾಮಂಗಳಾರತಿ ನಂತರ ಭಕ್ತರಿಗೆ ತೀರ್ಥ, ಪ್ರಸಾದ ವಿನಿಯೋಗ ವಿತರಿಸಲಾಯಿತು. ಬಳಿಕ ಅನ್ನದಾಸೋಹ ಮಾಡಲಾಯಿತು.
ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿಯಿಂದ ಅಖಂಡ ಭಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಂಗಳೂರು ಶಿವಣ್ಣ, ಅಯ್ಯಣ್ಣ, ಸ್ವಾಮಣ್ಣ, ಸೋಮಶೇಖರ್, ಹರೀಶ್, ಸಣ್ಣೇಗೌಡ, ವೆಂಕಟೇಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net