ಕೋಳಗುಂದ ಶಾಲೆಯಲ್ಲಿ ಪುಸ್ತಕ ಸಂತೆ ಕಾರ್ಯಕ್ರಮ

ಜಾವಗಲ್ ಹೋಬಳಿಯ ಕೋಳಗುಂದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಪುಸ್ತಕ ಸಂತೆ ಕಾರ್ಯಕ್ರಮದಲ್ಲಿ ಪ್ರಸನ್ನ ಕುಮಾರ್ ಸೂರೆ, ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.
ಜಾವಗಲ್ ಹೋಬಳಿಯ ಕೋಳಗುಂದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಪುಸ್ತಕ ಸಂತೆ ಕಾರ್ಯಕ್ರಮದಲ್ಲಿ ಪ್ರಸನ್ನ ಕುಮಾರ್ ಸೂರೆ, ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.
Published on
ಅರಸೀಕೆರೆ ಗ್ರಾಮಾಂತರ: ರಜಾ ಅವಧಿಯಲ್ಲಿ ಮಕ್ಕಳು ಕಲೆ ಸಾಹಿತ್ಯ ಕ್ರೀಡೆಯಂತಹ ಸೃಜನಾತ್ಮಕ ಕಾರ್ಯಗಳಲ್ಲಿ ತೊಡಗಿಕೊಳ್ಳುವುದರಿಂದ ಅವರ ಭೌತಿಕ ಮಟ್ಟ ವೃದ್ಧಿಸುತ್ತದೆ ಎಂದು ಶಿಕ್ಷಕ ಪ್ರಸನ್ನಕುಮಾರ್ ಸುರೆ ತಿಳಿಸಿದರು.
ತಾಲೂಕಿನ ಕೋಳಗುಂದ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಶಾಲಾ ಮಕ್ಕಳಿಗಾಗಿ ಆಯೋಜಿಸಿದ್ದ ಪುಸ್ತಕ ಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ನಾಡಿನ ಶ್ರೇಷ್ಠ ಸಾಹಿತಿಗಳು, ಚಿಂತಕರ ಪುಸ್ತಕಗಳು ಹಾಗೂ ರಾಮಾಯಣ, ಮಹಾಭಾರತ, ವಿವೇಕಾನಂದ, ಗಾಂಧೀಜಿ, ಕುವೆಂಪು ಸೇರಿದಂತೆ ಸುಮಾರು 20ಕ್ಕೂ ಹೆಚ್ಚಿನ ದಿಗ್ಗಜ ಸಾಹಿತಿಗಳ ಪುಸ್ತಕವನ್ನು ಮಕ್ಕಳಿಗೆ ನೀಡಿ ರಜಾ ಅವಧಿಯಲ್ಲಿ ಓದುವಂತೆ ಪ್ರೇರೆಪಿಸುವ ಜತೆಗೆ ಮಕ್ಕಳು ಸಹ ಕಥೆ, ಕವನಗಳ ರಚನೆ ಮಾಡುವ ಕಾರ್ಯಾಗಾರ ಹಮ್ಮಿಕೊಂಡು ಅವರಲ್ಲಿಯೂ ಬರವಣಿಗೆಯ ಅಭಿರುಚಿ ಮೂಡಿಸಲು ಪ್ರಯತ್ನಿಸಲಾಗುತ್ತದೆ ಎಂದರು.
ಜ್ಞಾನ ವಿಕಾಸನಕ್ಕೆ ಪುಸ್ತಕಗಳು ಬೇಕು ಜ್ಞಾನದ ಬೆಳವಣಿಗೆ ಆಗಬೇಕಾದರೆ ಪುಸ್ತಕಗಳನ್ನು ಹೆಚ್ಚು ಓದುತ್ತಿರಬೇಕು. ಮಕ್ಕಳು ತಮ್ಮ ಮನೆಯಲ್ಲಿ ಚಿಕ್ಕದೊಂದು ಗ್ರಂಥಾಲಯ ಪ್ರಾರಂಭಿಸಿ ಹೆಚ್ಚು ಹೆಚ್ಚು ಸಾಹಿತ್ಯಿಕ ಪುಸ್ತಕಗಳನ್ನು ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು ಹಾಗೂ ಪ್ರತಿ ವಿದ್ಯಾರ್ಥಿಯೂ ನಿಯಮಿತವಾಗಿ ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಅಭ್ಯಾಸ ಬೆಳಸಿಕೊಂಡರೆ ಜ್ಞಾನ ತಾನಾಗಿಯೇ ಹೆಚ್ಚುತ್ತದೆ ಪುಸ್ತಕಗಳನ್ನು ಓದುವುದರಿಂದ ಪ್ರಪಂಚ ಪರ್ಯಾಟನೆಯ ಅರಿವು ಮೂಡುತ್ತದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net