ನಾರ್ವೆ ಶಾಲೆ ಮಕ್ಕಳಿಗೆ ನೋಟ್ ಬುಕ್ ವಿತರಣೆ

ಜಯ ಕರ್ನಾಟಕ ಸಂಘಟನೆ ಅರೇಹಳ್ಳಿ ಹೋಬಳಿ ಘಟಕದಿಂದ ಶನಿವಾರ ನಾರ್ವೆ ಗ್ರಾಮದ ಬಸಮ್ಮ ಬಸವೇಗೌಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿ ಸಲಾಯಿತು. ಮಲ್ಲಿಕಾರ್ಜುನ, ಸೋಮು, ಸುಂದರ್, ಉಮೇಶ್, ಸುಧಾಬಾಯಿ, ಸೋಮಶೇಖರ್ ಒಡೆಯರ್, ಮಮತಾ, ರೋಹಿತ್ ಇದ್ದರು.

Published on

ಬೇಲೂರು :

ನಾರ್ವೆ ಗ್ರಾಮದ ಬಸಮ್ಮ ಬಸವೇಗೌಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಜಯ ಕರ್ನಾಟಕ ಸಂಘಟನೆ ಅರೇಹಳ್ಳಿ ಘಟಕದಿಂದ ಶನಿವಾರ ನೋಟ್‌ಬುಕ್‌ಗಳನ್ನು ವಿತರಿಸಲಾಯಿತು.

ಈ ಸಂದರ್ಭ ಮಾತನಾಡಿದ ಸಂಘಟನೆಯ ಘಟಕಾಧ್ಯಕ್ಷ ಮಲ್ಲಿಕಾರ್ಜುನ ನಾರ್ವೆ ಮಾತನಾಡಿ, ಸರ್ಕಾರಿ ಶಾಲೆ ಎಂದರೆ ಎಲ್ಲರೂ ಮೂಗು ಮುರಿಯುತ್ತಾರೆ. ಆದರೆ ಸರ್ಕಾರಿ ಶಾಲೆಗೆ ಬಡ ಮಕ್ಕಳೇ
ವಿವಿಧ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿರುತ್ತಾರೆ ಎಂದರು.
ಸರ್ಕಾರ ಮಕ್ಕಳ ವಿದ್ಯಾಭ್ಯಾಸಕ್ಕೆ ಹಲವು ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ನಮ್ಮ ಸಂಘಟನೆಯೂ
ಪ್ರತಿ ವರ್ಷ ಸ್ವಾತಂತ್ರ್ಯ ದಿನದಂದು ಮಕ್ಕಳಿಗೆ ನೋಟ್ ಬುಕ್‌ಗಳನ್ನು ವಿತರಿಸುತ್ತದೆ. ಈ ಸೌಲಭ್ಯಗಳನ್ನು ಮಕ್ಕಳು ಸದುಪಯೋಗ ಪಡಿಸಿಕೊಂಡು ವಿದ್ಯಾರ್ಜನೆ ಮಾಡಿ, ಉನ್ನತ ಹುದ್ದೆಗಳನ್ನು ಗಳಿಸಿಕೊಳ್ಳಬೇಕು ಎಂದರು.
ಪಾಠ ಮಾಡಿದ ಗುರುಗಳು, ತಂದೆ, ತಾಯಿ ಮತ್ತು ಗ್ರಾಮಕ್ಕೆ ಕೀರ್ತಿ ತರುವ ಸಾಧನೆಯನ್ನು ಮಾಡಲು ಮಕ್ಕಳು ಸಂಕಲ್ಪ ಮಾಡಬೇಕು. ಉನ್ನತ ಸ್ಥಾನ ಗಳಿಸಿದ ಮೇಲೆ ಸರ್ಕಾರಿ ಶಾಲಾ ಮಕ್ಕಳಿಗೆ ಕೈಲಾದ ನೆರವು ಕಲ್ಪಿಸಬೇಕು ಎಂದರು. ಜಯ ಕರ್ನಾಟಕ ಸಂಘಟನೆ ಅರೇಹಳ್ಳಿ ಹೋಬಳಿ ಉಪಾಧ್ಯಕ್ಷ ಸೋಮು, ಮುಖಂಡರಾದ ಸುಂದರ್, ಉಮೇಶ್, ಶಿಕ್ಷಕರಾದ ಸುಧಾಬಾಯಿ, ಸೋಮಶೇಖರ್ ಒಡೆಯರ್, ಮಮತಾ, ರೋಹಿತ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net