ಗಾಯಗೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆ

Body found in injured condition
Body found in injured condition
Published on
ಹೊಳೆನರಸೀಪುರ: ಯಡೆಗೌಡನಹಳ್ಳಿ ಮರ ಮಂಟಿಕೂಡು ಅರಣ್ಯ ಪ್ರದೇಶದ ಹಾಸನ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ರಾತ್ರಿ ಮೃತದೇಹ ಅನುಮಾನಾಸ್ಪದಾಗಿ ಪತ್ತೆಯಾಗಿದೆ.
ತಾಲೂಕಿನ ಸಿ ಹಿಂದಲಹಳ್ಳಿ ಗ್ರಾಮದ, ಖಾಸಗಿ ಲಾರಿಯ ಚಾಲಕನಾಗಿದ್ದ ಪುಟ್ಟರಾಜು (48) ಮೃತರು. ಮೃತವ್ಯಕ್ತಿಯ ದೇಹದ ಭಾಗಗಳಿಗೆ ಗಾಯಗಳಾಗಿದ್ದು ತಲೆ ಹಾಗೂ ಮುಖಭಾಗಕ್ಕೆ ಬಲವಾದ ಪೆಟ್ಟು ಬಿದ್ದಿರುವ ಸ್ಥಿತಿಯಲ್ಲಿ ದೊರೆತಿದೆ. ಪುಟ್ಟರಾಜು ಮಂಗಳವಾರ ಮಧ್ಯಾಹ್ನ ಸಂಬಂಧಿಕರೊಬ್ಬರ ಜತೆಯಲ್ಲಿ ಮನೆಯಿಂದ ಹೊರಹೋದ ನಂತರ ರಾತ್ರಿ ಶವವಾಗಿ ಸಿಕ್ಕಿದ್ದಾನೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರಿಗೆ ಪತ್ನಿ ಹಾಗೂ ಒಬ್ಬ ಪುತ್ರ ಇದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net