ಆತ್ಮವನ್ನು ಪರಮಾತ್ಮನಲ್ಲಿ ವಿಲೀನ ಗೊಳಿಸಲು ಮುಂದಾಗಿ

ಬೇಲೂರು ತಾಲೂಕಿನ ಗೆಂಡೇಹಳ್ಳಿ ಸಮೀಪದ ಶನಿವಾರಪೇಟೆ ಗ್ರಾಮದಲ್ಲಿ ಶ್ರೀ ರುದ್ರೇಶ್ವರಸ್ವಾಮಿ ದೇಗುಲದ ವಿಗ್ರಹ ಮರು ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮವನ್ನು ತೆಂಕಲಗೂಡು ಬೃಹನ್ಮಠದ ಶ್ರೀ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಗ್ರಾಪಂ ಅಧ್ಯಕ್ಷೆ ಮೀನಾಕ್ಷಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಮೊಗಪ್ಪಗೌಡ, ಮುಖಂಡರಾದ ಚಂದ್ರಪ್ಪಶೆಟ್ಟಿ, ರಾಜಶೇಖರ್ ಇದ್ದರು.
ಬೇಲೂರು ತಾಲೂಕಿನ ಗೆಂಡೇಹಳ್ಳಿ ಸಮೀಪದ ಶನಿವಾರಪೇಟೆ ಗ್ರಾಮದಲ್ಲಿ ಶ್ರೀ ರುದ್ರೇಶ್ವರಸ್ವಾಮಿ ದೇಗುಲದ ವಿಗ್ರಹ ಮರು ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮವನ್ನು ತೆಂಕಲಗೂಡು ಬೃಹನ್ಮಠದ ಶ್ರೀ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಗ್ರಾಪಂ ಅಧ್ಯಕ್ಷೆ ಮೀನಾಕ್ಷಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಮೊಗಪ್ಪಗೌಡ, ಮುಖಂಡರಾದ ಚಂದ್ರಪ್ಪಶೆಟ್ಟಿ, ರಾಜಶೇಖರ್ ಇದ್ದರು.
Published on
ತೆಂಕಲಗೂಡು ಬೃಹನ್ಮಠದ ಶ್ರೀ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಸಂದೇಶ
* ಶನಿವಾರಪೇಟೆಯಲ್ಲಿ ವಿಗ್ರಹ ಮರು ಪ್ರತಿಷ್ಠಾಪನೆ
ಬೇಲೂರು : ತಾಲೂಕಿನ ಗೆಂಡೇಹಳ್ಳಿ ಸಮೀಪದ ಶನಿವಾರಪೇಟೆ ಗ್ರಾಮದ ಪುರಾತನ ಶ್ರೀ ರುದ್ರೇಶ್ವರಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಕಳಸಾರೋಹಣ ಮತ್ತು ಶ್ರೀ ರುದ್ರೇಶ್ವರಸ್ವಾಮಿ ನೂತನ ವಿಗ್ರಹ ಮರು ಪ್ರತಿಷ್ಠಾಪನೆ ಕಾರ್ಯಕ್ರಮ ಸಕಲ ವಿಧಿ ವಿಧಾನಗಳ ನಡುವೆ ವಿಜೃಭಣೆಯಿಂದ ನೆರವೇರಿತು.
ಪುಣ್ಯಾಹದಿಂದ ಆರಂಭವಾದ ಕಾರ್ಯಕ್ರಮವು ಹೋಮ, ಹವನಗಳು ಹಾಗೂ ವಿಶೇಷ ಪೂಜಾ ಕೈಂಕಾರ್ಯಗಳು ನೂರಾರು ಭಕ್ತರ ಸಮ್ಮುಖದಲ್ಲಿ ಸಂಪನ್ನಗೊಂಡಿತು. ನೂರಾರು ಭಕ್ತರು ದೇವರ ದರ್ಶನ ಪಡೆದು ಧನ್ಯತೆ ಮೆರೆದರು.
ಯಸಳೂರು ತೆಂಕಲಗೂಡು ಬೃಹನ್ಮಠದ ಶ್ರೀ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಈ ದೇಹವು ಆತ್ಮೋನ್ನತಿಗಾಗಿ ನಮಗೆ ದೊರೆತ ಮಹತ್ತರ ಅವಕಾಶ ಎಂದರು. ಆತ್ಮವನ್ನು ಪರಮಾತ್ಮನಲ್ಲಿ ವಿಲೀನ ಗೊಳಿಸುವ ಸಾಧನವೇ ಮಾನವನ ದೇಹ. ಇದನ್ನು ಪ್ರತಿಯೊಬ್ಬರೂ ಸದ್ಬಳಕೆ ಮಾಡಿ ಕೊಳ್ಳಬೇಕು. ದೇವರು ನಮಗೆ ಅಮೂಲ್ಯವಾದ ಜೀವನ ಕೊಟ್ಟಿದ್ದಾನೆ. ಆದರೆ ನಾವುಗಳು ಭೌತಿಕ ಸುಖಗಳ ಹಿಂದೆ ಓಡದೆ, ಭಕ್ತಿಯಿಂದ ಪರಮಾತ್ಮನ ಧ್ಯಾನ ಮಾಡುವ ಮೂಲಕ ಜೀವನವನ್ನು ಸಾರ್ಥಕ ಗೊಳಿಸಿ ಕೊಳ್ಳಬೇಕು ಎಂದರು. ಭಾರತ ವಿಶ್ವಕ್ಕೆ ಗುರು ಸ್ಥಾನವನ್ನು ನೀಡಿದ ಏಕೈಕ ದೇಶವಾಗಿದೆ. ನಮ್ಮ ಸಂಸ್ಕೃತಿ ಮತ್ತು ಧರ್ಮವನ್ನು ಉಳಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಸ್ವಾಮೀಜಿ ನುಡಿದರು.
ಆಧ್ಯಾತ್ಮಿಕ ಚಿಂತನೆ ಹೆಚ್ಚಿಸಬೇಕು :
ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದೇವಾಲಯಗಳು ಕೇವಲ ಪೂಜಾ ಕೇಂದ್ರಗಳಲ್ಲ, ಅವು ಸಂಸ್ಕಾರ, ಸಂಸ್ಕೃತಿ ಮತ್ತು ಸಾಮಾಜಿಕ ಏಕತೆಯ ಕೇಂದ್ರಗಳಾಗಿವೆ. ನೂತನ ವಿಗ್ರಹ ಮರು ಪ್ರತಿಷ್ಠಾಪನೆ ಹಾಗೂ ಗೋಪುರದ ಕಳಸಾ ರೋಹಣದಂತಹ ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಧರ್ಮ ಬೋಧನೆ ಹಾಗೂ ಆಧ್ಯಾತ್ಮಿಕ ಚಿಂತನೆ ಹೆಚ್ಚಿಸಬೇಕು ಎಂದರು. ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಯುವ ಪೀಳಿಗೆಯಲ್ಲಿ ಧರ್ಮ, ಶ್ರದ್ಧೆ ಮತ್ತು ಸಂಪ್ರದಾಯಗಳ ಅರಿವು ಮೂಡಿಸಬೇಕು. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಧರ್ಮ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿ ಕೊಂಡಾಗ ಮಾತ್ರ ಸಮಾಜ ಸುಸಂಸ್ಕೃತವಾಗುತ್ತದೆ ಎಂದರು.
ಸಂಸ್ಕಾರ ಪಾಲನೆಗೆ ಮುಂದಾಗಿ: ಕಸಾಪ ಗೌರವ ಕಾರ್ಯದರ್ಶಿ ಬಿ.ಬಿ.ಶಿವರಾಜ್ ಮಾತನಾಡಿ, ಭಕ್ತರಾಗುವುದು ಸುಲಭವಾದರೂ ಧಾರ್ಮಿಕವಾಗಿ ಬದುಕುವುದು ಸವಾಲಾಗಿದೆ ಎಂದರು. ನಾವು ಧಾರ್ಮಿಕತೆಯನ್ನು ಮರೆಯುತ್ತಿರುವುದು ಆತಂಕಕಾರಿ. ನಮ್ಮ ಸಂಸ್ಕೃತಿ, ಸಂಸ್ಕಾರ ಮತ್ತು ಧರ್ಮವನ್ನು ಕಾಪಾಡಲು ಎಲ್ಲರೂ ಮುಂದಾಗಬೇಕು ಎಂದರು.
ಮಾಜಿ ಸಚಿವ ಬಿ.ಶಿವರಾಮ್, ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ಗ್ರಾಪಂ ಅಧ್ಯಕ್ಷೆ ಮೀನಾಕ್ಷಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಮೊಗಪ್ಪಗೌಡ, ಮುಖಂಡರಾದ ಚಂದ್ರಪ್ಪಶೆಟ್ಟಿ, ರಾಜಶೇಖರ್, ಶಂಕರಾಚಾರ್, ಕಲ್ಲಪ್ಪಶೆಟ್ಟಿ, ಚೇತನ್ ಗೆಂಡೇಹಳ್ಳಿ, ಗಿರೀಶ್, ಶೋಭಾಗಣೇಶ್ ಸೇರಿದಂತೆ ನೂರಾರು ಭಕ್ತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net