

ಪ್ರಮುಖ ಮುಖ್ಯಾಂಶಗಳು
ಹಾಸನ:
ಹೇಮಾವತಿ ಅಣೆಕಟ್ಟು ವ್ಯಾಪ್ತಿಯಲ್ಲಿ ಬರುವ ರೈತರ ಜಮೀನಿಗೆ ನೀರು ಕೊಡಬೇಕು ಹಾಗೂ ಅಚ್ಚುಕಟ್ಟು ಪ್ರದೇಶದ ಕೆರೆಗಳನ್ನು ತುಂಬಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ರೈತ ಮೋರ್ಚಾದ ವತಿಯಿಂದ ಮಂಗಳವಾರ ಹೇಮಾವತಿ ಮುಖ್ಯ ಅಭಿಯಂತರರ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನಾಕಾರರು ನಮ್ಮ ನೀರು ನಮ್ಮ ಹಕ್ಕು, ನಮ್ಮ ನೀರು ನಮಗೆ ಇರಲಿ, ರೈತರನ್ನು ಉಳಿಸಿ ಎಂಬ ಘೋಷಣೆಗಳನ್ನು ಕೂಗಿದರು.
ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ. ಬಿ.ಸಿ.ನವೀನ್ ಕುಮಾರ್ ಮಾತನಾಡಿ, ರಾಜ್ಯ ಸರ್ಕಾರ
ಮಾರ್ಚ್ ತಿಂಗಳಲ್ಲಿ ಮುಂಗಾರು ಕೈ ಕೊಡುವ ಸಾಧ್ಯತೆ ಇದೆ. ಹೀಗಾಗಿ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂದು ಸುತ್ತೋಲೆ ಹೊರಡಿಸಿದೆ. ಆದರೆ ಇದಕ್ಕೆ ಪೂರಕವಾಗಿ ರೈತರ ಬಗ್ಗೆ ಕಾಳಜಿವಹಿಸುವ ಯಾವುದೇ ಕೆಲಸ ಮಾಡಲಿಲ್ಲ. ಒಬ್ಬರು ಖುರ್ಚಿ ಉಳಿಸಿಕೊಳ್ಳಬೇಕು, ಒಬ್ಬರು ಖುರ್ಚಿ ಪಡೆದುಕೊಳ್ಳಬೇಕು ಎಂಬ ಹೋರಾಟದಲ್ಲಿ ರಾಜ್ಯದ ರೈತರನ್ನು ನಿರ್ಲಕ್ಷೃ ಮಾಡಿದರು ಎಂದು ದೂರಿದರು.
ಸಿಎಂ ಡಿ.ಕೆ.ಶಿವಕುಮಾರ್‌ಗೆ ರಿಯಲ್ ಎಸ್ಟೇಟ್ ಮೇಲೆ ಹೆಚ್ಚಿನ ಆಸಕ್ತಿ ಇರುವುದರಿಂದ ರೈತರ ಕಷ್ಟದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಮಾನಸಿಕ ಸ್ಥೈರ್ಯತುಂಬದೆ ರೈತರನ್ನು ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ. ಮೂರು ವರ್ಷದಲ್ಲಿ 3 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಬೊಟ್ಟು ಮಾಡುವುದನ್ನು ಮರೆತು ಒಕ್ಕೂಟ ವ್ಯವಸ್ಥೆಯಲ್ಲಿ ಕೆಲಸ ಮಾಡಬೇಕು.