ಸಾಹಿತಿ ಎ.ಎನ್. ಮೂರ್ತಿರಾವ್ ಜನ್ಮದಿನಾಚರಣೆ

ಪ್ರೊ.ಎ.ಎನ್. ಮೂರ್ತಿರಾವ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಬಂಧ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶ್ರೀ ಎಂ.ಜಿ.ರೇವಣ್ಣ, ಶಶಿಧರ ಭಾರಿಘಾಟ್, ಉಮಾಶಂಕರಸ್ವಾಮಿ, ಕತ್ತರಘಟ್ಟ ವಾಸು, ಜಯಕುಮಾರ್, ಮೊಹಮ್ಮದ್ ಅಜರುದ್ದೀನ್ ಇದ್ದರು.
ಪ್ರೊ.ಎ.ಎನ್. ಮೂರ್ತಿರಾವ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಬಂಧ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶ್ರೀ ಎಂ.ಜಿ.ರೇವಣ್ಣ, ಶಶಿಧರ ಭಾರಿಘಾಟ್, ಉಮಾಶಂಕರಸ್ವಾಮಿ, ಕತ್ತರಘಟ್ಟ ವಾಸು, ಜಯಕುಮಾರ್, ಮೊಹಮ್ಮದ್ ಅಜರುದ್ದೀನ್ ಇದ್ದರು.
Published on
ಕೆ.ಆರ್.ಪೇಟೆ: ತಾಲೂಕಿನ ಅಕ್ಕಿಹೆಬ್ಬಾಳಿನ ಸರ್ಕಾರಿ ಪ್ರೌಢಶಾಲಾ ಆವರಣದ ರಂಗಮಂದಿರದಲ್ಲಿ, ಲೋಕಾಯಾನ ಕಲ್ಚರಲ್ ಫೌಂಡೇಶನ್, ಹೇಮಾವತಿ ಹೊನ್ನಾರು ವೇದಿಕೆ ಮತ್ತು ಅಕ್ಕಿಹೆಬ್ಬಾಳು ಚಿಂತಕರ ವೇದಿಕೆಯ ಸಹಯೋಗದಲ್ಲಿ ಖ್ಯಾತ ಸಾಹಿತಿ ಪ್ರೊ.ಎ.ಎನ್. ಮೂರ್ತಿರಾವ್ ಅವರ ಜನ್ಮದಿನವನ್ನು ಆಚರಿಸಲಾಯಿತು.
ಪ್ರೊ.ಎ.ಎನ್.ಮೂರ್ತಿರಾವ್ ಉದ್ಯಾನವನದಲ್ಲಿ ಶ್ರಮದಾನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
ವಿಚಾರಗೋಷ್ಠಿಯಲ್ಲಿ ಮಾತನಾಡಿದ ಹರಿಹರಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಶ್ರೀ ಎಂ.ಜಿ.ರೇವಣ್ಣ, ಮೂರ್ತಿರಾಯರ ಬದುಕು ಮತ್ತು ಬರಹಗಳಲ್ಲಿನ ಆಪ್ತತೆಯನ್ನು ವಿಸ್ತಾರವಾಗಿ ವಿಶ್ಲೇಷಿಸಿದರು. ಮೂರ್ತಿರಾಯರು ತಮ್ಮ ಬರಹಗಳಲ್ಲಿ ಮನುಷ್ಯನ ಅಂತರಾಳದ ತಳಮಳಗಳನ್ನು, ಸಂಶಯಗಳನ್ನು ಮತ್ತು ನಂಬಿಕೆಗಳನ್ನು ಸರಳ ಭಾಷೆಯಲ್ಲಿ ತೆರೆದಿಟ್ಟಿದ್ದಾರೆ ಎಂದು ಬಣ್ಣಿಸಿದರು. ಅವರ ಸಾಹಿತ್ಯವು ಕುರುಡು ನಂಬಿಕೆಗಳನ್ನು ಪ್ರಶ್ನಿಸುತ್ತಲೇ ಮನುಷ್ಯ ವಿವೇಚನೆಯಿಂದ ಬದುಕುವುದನ್ನು ಕಲಿಸುತ್ತದೆ ಎಂದು ತಿಳಿಸಿದರು.
ಮೈಸೂರಿನ ಎಸ್‌ಡಿಎಂ ಕಾಲೇಜಿನ ಕನ್ನಡ ಅಧ್ಯಾಪಕ ಪ್ರೊ. ಮಾರುತಿ ಪ್ರಸನ್ನ ಮಾತನಾಡಿದರು.
ಡಾ ಕೆ.ಪಿ.ಪ್ರತಿಮಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಲೋಕಾಯಾನ ಕಲ್ಚರಲ್ ಫೌಂಡೇಶನ್ ಮುಖ್ಯಸ್ಥರಾದ ಶಶಿಧರ ಭಾರಿಘಾಟ್, ಉಮಾಶಂಕರಸ್ವಾಮಿ, ಕತ್ತರಘಟ್ಟ ವಾಸು, ಜಯಕುಮಾರ್, ಮೊಹಮ್ಮದ್ ಅಜರುದ್ದೀನ್ ಅಕ್ಕಿಹೆಬ್ಬಾಳು, ಅಭಿನಂದನ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net