ಕಾರು ಡಿಕ್ಕಿಯಾಗಿ ಬೈಕ್ ಸವಾರ ಸಾವು

ಸಿ.ಸಿ.ಯೋಗೇಶ್
ಸಿ.ಸಿ.ಯೋಗೇಶ್
Published on
ಹೊಳೆನರಸೀಪುರ: ಲಾರಿಯನ್ನು ಹಿಂದಿಕ್ಕಲು ಬಂದ ಕಾರು ಚಾಲಕ ಎದುರಿಗೆ ಬಂದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಚಿಕ್ಕಕಾಡನೂರು ಗ್ರಾಮದ ನಿವಾಸಿ ಸಿ.ಸಿ.ಯೋಗೇಶ್ (38) ಮೃತ ಬೈಕ್ ಸವಾರ. ತಾಲೂಕಿನ ಹಾಸನ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪೆದ್ದನಹಳ್ಳಿ ಗೇಟ್ ಪೆಟ್ರೋಲ್ ಬಂಕ್ ಸಮೀಪ ಹೋಗುತ್ತಿದ್ದ ಲಾರಿಯನ್ನು ಹಿಂದಿಕ್ಕಿ ಹೋಗಲು ಮುನ್ನುಗ್ಗಿದ ಕಾರು ಚಾಲಕ ಎದುರಿಗೆ ಬರುತ್ತಿದ್ದ ಯೋಗೇಶ್ ಇದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಯೋಗೇಶ್ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಇವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ. ಮೃತನ ಅಂತ್ಯಕ್ರಿಯೆ ಚಿಕ್ಕಕಾಡನೂರು ಗ್ರಾಮದಲ್ಲಿ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net