ಭೀಮಾ ಕೋರೆಗಾಂವ್ ವಿಜಯೋತ್ಸವ

ಸಕಲೇಶಪುರದ ಹಳೇ ಬಸ್ ನಿಲ್ದಾಣದಲ್ಲಿ ಭೀಮಾ ಕೋರೆಂಗಾವ್ ವಿಜಯೋತ್ಸವ ಆಚರಿಸಲಾಯಿತು.
ಸಕಲೇಶಪುರದ ಹಳೇ ಬಸ್ ನಿಲ್ದಾಣದಲ್ಲಿ ಭೀಮಾ ಕೋರೆಂಗಾವ್ ವಿಜಯೋತ್ಸವ ಆಚರಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಬೌದ್ಧ ಮಹಾಸಭಾ ಅಧ್ಯಕ್ಷ ಸಿದ್ದರಾಜು
  • ಶೋಷಿತ ಸಮಾಜ ಎಚ್ಚರಗೊಳ್ಳುವ ಅಗತ್ಯವಿದೆ
ಸಕಲೇಶಪುರ: ಶೋಷಿತ ಸಮಾಜ ಎಚ್ಚರಗೊಳ್ಳುವ ಅಗತ್ಯವಿದೆ ಎಂದು ರಾಜ್ಯ ಬೌದ್ಧ ಮಹಾಸಭಾ ಅಧ್ಯಕ್ಷ ಸಿದ್ದರಾಜು ಹೇಳಿದರು.
ಪಟ್ಟಣದ ಹಳೇ ಬಸ್ ನಿಲ್ದಾಣ ಸಮೀಪ ಭೀಮಾ ಕೋರೆಗಾಂವ್ ವಿಜಯೋತ್ಸವ ಸಮಿತಿಯಿಂದ ಗುರುವಾರ ಆಯೋಜಿಸಿದ್ದ 8ನೇ ವರ್ಷದ ಭೀಮಾ ಕೋರೆಗಾಂವ್ ವಿಜಯೋತ್ಸವದಲ್ಲಿ ಮಾತನಾಡಿದ ಅವರು, ಇಂದಿನ ಯುವ ಜನಾಂಗ ಅಂಬೇಡ್ಕರ್ ಅವರ ನಡೆ-ನುಡಿಯನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.
208 ವರ್ಷಗಳ ಹಿಂದೆ ನಡೆದ ಕೋರೆಗಾಂವ್ ಯುದ್ಧ ಅಸ್ಪಶ್ಯತೆ ವಿರುದ್ಧ ನಡೆದ ಮೊದಲ ಹೋರಾಟವಾಗಿದೆ. ಬಹುಜನರ ಇತಿಹಾಸವನ್ನು ಬರೆಯದಿರುವುದು ದುರಂತ. ಶಿಕ್ಷಣದಿಂದ ಮಾತ್ರ ಶೋಷಿತ ಸಮಾಜ ಸುಧಾರಣೆಯಾಗಲಿದೆ ಎಂದು ಪ್ರತಿಪಾದಿಸಿದವರು ಅಂಬೇಡ್ಕರ್. ಮನುಸ್ಮತಿಯನ್ನು ವಿರೋಧಿಸಿದ ಅಂಬೇಡ್ಕರ್ ಮಾನವತಾವಾದಿ. ಇಂದು ಶಿಕ್ಷಣವಿಲ್ಲದ ಮನುಷ್ಯ ಪಶುವಿಗೆ ಸಮಾನ. ಆದ್ದರಿಂದ ಯಾರೂ ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎಂದರು.
ಲೇಖಕಿ ಅನುಪಮಾ ಮಾತನಾಡಿ, ಶೋಷಿತ ಸಮಾಜ ಬದಲಾಗಬೇಕಿದ್ದು, ಇದರಿಂದ ಮಾತ್ರ ನಾವು ಜಾಗೃತರಾಗಲು ಸಾಧ್ಯ ಎಂದರು.
ವಕೀಲ ಸುಧೀರ್‌ಕುಮಾರ್ ಮುರುಡಿ ಮಾತನಾಡಿ, ಕೋರೆಗಾಂವ್ ವಿಜಯೋತ್ಸವದ ನಂತರ ದಲಿತರಿಗೆ ತಮ್ಮ ತೊಳ್ಬಲದ ಅರಿವಾಗಿದೆ. ಶೋಷಿತರ ಮೊದಲ ಗೆಲುವು ಕೋರೆಗಾಂವ್ ಯುದ್ಧ. ಇದನ್ನು ಇತಿಹಾಸದಲ್ಲಿ ದಾಖಲಿಸದಿರುವುದು ಶೋಷಿತ ಸಮಾಜಕ್ಕೆ ಮಾಡಿದ ದ್ರೋಹ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಮಿನಿವಿಧಾನಸೌಧ ಸಮೀಪದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಪಟ್ಟಣದ ಮುಖ್ಯ ಬೀದಿಯಲ್ಲಿ ಕಲಾತಂಡಗಳೊಂದಿಗೆ ಅಂಬೇಡ್ಕರ್ ಬಾವಚಿತ್ರ ಹಾಗೂ ಕೋರೆಗಾಂವ್ ವಿಜಯಸ್ತಂಭವನ್ನು ಮೆರವಣಿಗೆ ಮಾಡಲಾಯಿತು. ಜಿಪಂ ಮಾಜಿ ಸದಸ್ಯ ಬೈರಮುಡಿಚಂದ್ರು, ಕಾಂಗ್ರೆಸ್ ಮುಖಂಡ ಮುರಳಿಮೋಹನ್, ಸಮಿತಿ ಅಧ್ಯಕ್ಷ ಲಕ್ಷ್ಮಣ್‌ಕೀರ್ತಿ, ಗೌರವಾಧ್ಯಕ್ಷ ನಲ್ಲುಲ್ಲಿ ಈರಪ್ಪ, ಹೆತ್ತೂರು ಅಣ್ಣಯ್ಯ ಮುಂತಾದವರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net