ಸ್ವಚ್ಛತೆಗೆ ಶ್ರಮಿಸಿದ ಪೌರಕಾರ್ಮಿಕರಿಗೆ ಸನ್ಮಾನ

ಶ್ರೀ ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವದ ಸಂದರ್ಭ ಸ್ವಚ್ಛತೆಯಲ್ಲಿ ತೊಡಗಿದ್ದ ಪುರಸಭೆಯ ಪೌರಕಾರ್ಮಿಕರನ್ನು ದೇಗುಲದ ವತಿಯಿಂದ ಸನ್ಮಾನಿಸಲಾಯಿತು.
ಶ್ರೀ ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವದ ಸಂದರ್ಭ ಸ್ವಚ್ಛತೆಯಲ್ಲಿ ತೊಡಗಿದ್ದ ಪುರಸಭೆಯ ಪೌರಕಾರ್ಮಿಕರನ್ನು ದೇಗುಲದ ವತಿಯಿಂದ ಸನ್ಮಾನಿಸಲಾಯಿತು.
Published on
ಬೇಲೂರು: ಸತತವಾಗಿ 13 ದಿನಗಳ ಕಾಲ ನಡೆದ ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವದ ಸಂದರ್ಭ ಸ್ವಚ್ಛತೆಯಲ್ಲಿ ತೊಡಗಿದ್ದ ಪುರಸಭೆಯ ಪೌರಕಾರ್ಮಿಕರನ್ನು ಭಾನುವಾರ ದೇಗುಲದ ವತಿಯಿಂದ ಅಭಿನಂದಿಸಲಾಯಿತು.
ಪೌರಕಾರ್ಮಿಕರನ್ನು ಅಭಿನಂದಿಸಿ ಮಾತನಾಡಿದ ತಹಸೀಲ್ದಾರ್ ಶ್ರೀಧರ್ ಕಂಕನವಾಡಿ, ಪೌರಕಾರ್ಮಿಕರ ಪರಿಶ್ರಮ ಉತ್ತಮವಾಗಿದೆ. ಯಾವುದೇ ಕೆಲಸವನ್ನು ಯಾರಿಂದಲೂ ಹೆಳಿಸಿಕೊಳ್ಳದೆ ಮಳೆ, ಬಿಸಿಲೆನ್ನದೆ ದಿನದ 24 ಗಮಟೆಯೂ ಸ್ವಚ್ಛತೆಗೆ ಹೆಚ್ಚು ಒತ್ತು ಕೊಟ್ಟು ಕೆಲಸ ಮಾಡುವ ಮೂಲಕ ಜಾತ್ರಾ ಮಹೋತ್ಸವದ ಯಶಸ್ಸಿನಲ್ಲಿ ಅವರೂ ಭಾಗಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದು ಅವರನ್ನು ತಾಲೂಕು ಆಡಳಿತದಿಂದ ಅಭಿನಂದಿಸಿದ್ದೇವೆ. ಅವರಿಗೆ ದೇವರು ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ ಎಂದರು.
ಪುರಸಭೆ ಪ್ರಭಾರ ಅಧ್ಯಕ್ಷೆ ಉಷಾ ಸತೀಶ್ ಮಾತನಾಡಿ, ಜಾತ್ರಾ ಮಹೋತ್ಸವದಲ್ಲಿ ತಾಲೂಕಿನ ಎಲ್ಲ ಇಲಾಖೆ ಅಧಿಕಾರಿಗಳ ತಂಡ ಉತ್ತಮವಾಗಿ ಕೆಲಸ ಮಾಡಿದೆ. ಪೌರಕಾರ್ಮಿಕರು ಹೆಚ್ಚು ಶ್ರದ್ಧೆಯಿಂದ ಹಗಲು-ರಾತ್ರಿ ಕೆಲಸ ಮಾಡಿದ್ದಾರೆ. ಆದ್ದರಿಂದಲೇ ರಥೋತ್ಸವ ಯಶಸ್ವಿಯಾಗಿದ್ದು ಎಲ್ಲರನ್ನು ಅಭಿನಂದಿಸುತ್ತೇನೆ ಎಂದರು.
ದೇಗುಲದ ಇಒ ಯೋಗೇಶ್, ಪುರಸಭೆ ಸದಸ್ಯರಾದ ಅಕ್ರಂ ಷರೀಫ್, ರತ್ನಕ್ಕ, ಮುಖ್ಯಾಧಿಕಾರಿ ಬಸವರಾಜ್ ಕಾಟಪ್ಪ ಸಿಗ್ಗಾವಿ, ಆರೋಗ್ಯಾಧಿಕಾರಿ ಲೋಹಿತ್, ದೇಗುಲದ ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net