ಬೇಲೂರು: ಪಟ್ಟಣದ ಶ್ರೀ ಶೃಂಗೇರಿ ಶಾರದಾ ಪೀಠ ಶಂಕರ ಮಠದಲ್ಲಿ ಷಷ್ಠಿ ಪೂಜೆ, ಶ್ರೀದೇವಿಯ ರಥೋತ್ಸವ, ಅಡ್ಡಪಲ್ಲಕ್ಕಿ ಉತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಸಡಗರ ಸಂಭ್ರಮದಿಂದ ನೆರವೇರಿತು.
ಶಂಕರ ಮಠದ ಶ್ರೀಶಾರದಾ ದೇವಿಯ ಅಡ್ಡಪಲ್ಲಕ್ಕಿ ಉತ್ಸವವನ್ನು ಕೋಟೆ ಶ್ರೀಚನ್ನಕೇಶವಸ್ವಾಮಿ ದೇಗುಲದ ಎಂಟು ಬೀದಿಗಳಲ್ಲಿ ಗಾಯತ್ರಿ ಭಜನಾ ಮಂಡಳಿಯ ವನಿತೆಯರ ಭಜನೆ ಹಾಗೂ ಲಲಿತಾ ಸಹಸ್ರನಾಮ, ವೇದಘೋಷಗಳೊಂದಿಗೆ ನೂರಾರು ಭಕ್ತರು ದೇವರ ಉತ್ಸವವನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ವಿಜೃಂಭಣೆಯಿಂದ ನೆರವೇರಿಸಿದ ನಂತರ ದೇಗುಲದ ಪ್ರಾಂಗಣದಲ್ಲಿ ರಥೋತ್ಸವವನ್ನು ನಡೆಸಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಶ್ರೀಶೃಂಗೇರಿ ಶಾಖಾ ಶಂಕರ ಮಠದ ಧರ್ಮಧಿಕಾರಿ ಸಿ.ಆರ್.ವಿಜಯಕೇಶವ ನೇತೃತ್ವ ವಹಿಸಿದ್ದರು.
ಉತ್ಸವದಲ್ಲಿ ಮಠದ ಭಕ್ತರಾದ ಸುಮಂತ್‌ಕುಮಾರ್ ಶರ್ಮಾ, ಪ್ರಶಾಂತ್‌ಕುಮಾರ್, ಹೇಮಂತ್, ಹಾನಂಬಿ ರಮೇಶ್, ಕಾಫಿ ಬೋರ್ಡ್ ಸುರೇಶ್, ತೊ.ಚ.ಅನಂತ ಸುಬ್ಬರಾಯ, ನಾರಾಯಣರಾವ್, ಅನಂತಮೂರ್ತಿ, ಗುಂಡಣ್ಣ, ಶ್ರೀಧರ, ನಾಗರಾಜ, ಪ್ರಸನ್ನ, ಶ್ರೀವತ್ಸ, ಗಾಯತ್ರಿ ಭಜನಾ ಮಂಡಳಿ ಶಾರದಮ್ಮ ಹಾಗೂ ಭಕ್ತರು ಹಾಜರಿದ್ದರು.