ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ

-ಬೇಲೂರು ತಾಲೂಕಿನ ಮಲ್ಲರಹೊಸಳ್ಳಿ (ಆಂದೂರು)ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಶಾಸಕ ಎಚ್.ಕೆ.ಸುರೇಶ್ ಭೂಮಿಪೂಜೆ ನೆರವೇರಿಸಿದರು. ಸೋಮಶೇಖರ್,ಹರೀಶ್, ಉದಯ್, ಶಿವಣ್ಣ, ಕಿರಣ್, ಚರಣ್ ಇತರರಿದ್ದರು.
-ಬೇಲೂರು ತಾಲೂಕಿನ ಮಲ್ಲರಹೊಸಳ್ಳಿ (ಆಂದೂರು)ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಶಾಸಕ ಎಚ್.ಕೆ.ಸುರೇಶ್ ಭೂಮಿಪೂಜೆ ನೆರವೇರಿಸಿದರು. ಸೋಮಶೇಖರ್,ಹರೀಶ್, ಉದಯ್, ಶಿವಣ್ಣ, ಕಿರಣ್, ಚರಣ್ ಇತರರಿದ್ದರು.
Published on
ಬೇಲೂರು: ಕಾವೇರಿ ನೀರಾವರಿ ನಿಗಮದಿಂದ 1.20 ಕೋಟಿ ರೂ. ಅನುದಾನದಲ್ಲಿ ತಾಲೂಕಿನ ಮಲ್ಲರಹೊಸಳ್ಳಿ(ಆಂದೂರು) ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಚ್.ಕೆ.ಸುರೇಶ್ ಸೋಮವಾರ ಭೂಮಿಪೂಜೆ ನೆರವೇರಿಸಿದರು.
ಎಚ್.ಕೆ.ಸುರೇಶ್ ಮಾತನಾಡಿ, ಈ ಗ್ರಾಮಸ್ಥರ ಬಹು ದಿನಗಳ ಬೇಡಿಕೆ ರಸ್ತೆ ಮತ್ತು ಕೆರೆ ಏರಿ ವಿಸ್ತರಣೆ ಮಾಡಬೇಕೆಂಬುದಾಗಿತ್ತು. ಚುನಾವಣೆಗೂ ಮುನ್ನ ಸ್ವಂತ ಹಣದಲ್ಲಿ ಕೆರೆ ಅಭಿವೃದ್ಧಿ ಕೆಲಸ ಮಾಡಿಸಿದ್ದೆ. ಆದರೆ ಈಗ ಶಾಸಕನಾದ ನಂತರ ಮತ್ತೆ ಮಲ್ಲರಹೊಸಳ್ಳಿ(ಆಂದೂರು) ಗ್ರಾಮಸ್ಥರ ಬೇಡಿಕೆಯಂತೆ ಕಾವೇರಿ ಅಭಿವೃದ್ಧಿ ನಿಗಮದಿಂದ ಗ್ರಾಮಕ್ಕೆ ಮತ್ತಷ್ಟು ರಸ್ತೆ ಅಭಿವೃದ್ಧಿ ಕೆಲಸ ಮಾಡಿಸಲಾಗುತ್ತಿದೆ. ಇದರ ಜತೆಗೆ ಗ್ರಾಮಸ್ಥರ ಬೇಡಿಕೆಯಂತೆ ಗ್ರಾಮಕ್ಕೆ ತೆರಳುವ ಸಂದರ್ಭ ಸಿಗುವ ಕೆರೆ ಏರಿ ಅಗಲೀಕರಣ ಕೆಲಸವನ್ನು ಮುಂದಿನ ದಿನಗಳಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಮಾಡಿಸಲು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದರು.
ಈಗ ರಸ್ತೆ ಅಭಿವೃದ್ಧಿಗಾಗಿ 1.20 ಕೋಟಿ ರೂ.ನಲ್ಲಿ ರಸ್ತೆ ಕೆಲಸವಾದ ನಂತರ ಮತ್ತೆ ಸಂಪೂರ್ಣ ರಸ್ತೆ ಕೆಲಸ ಮಾಡಿಸಿಕೊಡುತ್ತೇನೆ. ನನ್ನ ಪೂರ್ವ ಜನ್ಮದ ಪುಣ್ಯವೊ ಏನೋ ಗೊತ್ತಿಲ್ಲ. ನಿಮ್ಮೆಲ್ಲರ ಆಶೀರ್ವಾದದಿಂದ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಿಸಿ ಕೊಡಲಾಗುವುದು. ನಾನು ನಿಮಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ಸದಾ ನನ್ನ ಮೇಲಿರಲಿ ಎಂದರು.
ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸೋಮಶೇಖರ್, ಗ್ರಾಪಂ ಮಾಜಿ ಅಧ್ಯಕ್ಷ ಹರೀಶ್, ಮಾಜಿ ಸದಸ್ಯ ಉದಯ್, ಗ್ರಾಮಸ್ಥರಾದ ಶಿವಣ್ಣ, ಕಿರಣ್, ಚರಣ್, ಅಮೃತ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net