ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್‌ಕುಮಾರ್ ಮಾತನಾಡಿ, ಈ ಶಾಲೆಯಲ್ಲಿ ಬಹುಮುಖ್ಯವಾಗಿ ವಿದ್ಯಾಭ್ಯಾಸದ ಜತೆಗೆ ಮಕ್ಕಳಲ್ಲಿ ಶಿಸ್ತು ಹೇಳಿಕೊಡುತ್ತಾರೆ. ಇದು ಒಳ್ಳೆಯ ವಾತಾವರಣವಾಗಿದ್ದು ಪಾಲಕರು ಮಕ್ಕಳಿಗೆ ಹೆಚ್ಚು ಒತ್ತಡ ನೀಡಬಾರದು. ಹತ್ತು ಹನ್ನೆರಡು ವರ್ಷದವರೆಗೆ ಮನೆಯಲ್ಲಿ ಮಕ್ಕಳು ಹಾಡುತ್ತ, ನಲಿಯುತ್ತ ಕಲಿಯುವ ರೀತಿ ಶಾಲೆಯಲ್ಲೂ ಪರಿಸ್ಥಿತಿ ನಿರ್ಮಾಣ ಮಾಡಬೇಕು. ಈ ಶಾಲೆ ಒಳ್ಳೆಯ ವಿದ್ಯಾಭ್ಯಾಸ ಹಾಗೂ ಶಿಸ್ತನ್ನು ಕೊಡುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.