ಕೆರೆಯಲ್ಲಿ ಮುಳುಗಿ ಬಾವ, ಬಾಮೈದ ಸಾವು

ಬಾಲಕ ಪ್ರತೀಕ್
ಬಾಲಕ ಪ್ರತೀಕ್
Published on
ಗಂಡಸಿ(ಹಾಸನ): ಬೇಸಿಗೆ ರಜೆಗೆಂದು ಅಕ್ಕನ ಮನೆಗೆ ಬಂದಿದ್ದ ಬಾಲಕ ಹಾಗೂ ಆತನ ಭಾವ ಇಬ್ಬರು ಕೆರೆಯಲ್ಲಿ ಹಸುವಿಗೆ ನೀರು ಕುಡಿಸಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಪ್ರಭಾಕರ್ (45), ಸಾಯಿ ಪ್ರತೀಕ್ (12) ಮೃತರು. ಬಾಲಕ ಪ್ರತೀಕ್ ಹಾಸನ ತಾಲೂಕಿನ ದುದ್ದ ಹೋಬಳಿಯ ಸೋಮನಹಳ್ಳಿ ಗ್ರಾಮದವನು. ಬೇಸಿಗೆ ರಜೆ ಹಿನ್ನೆಲೆಯಲ್ಲಿ ತನ್ನ ಅಕ್ಕ ಪೂರ್ಣಿಮಾ ಅವರ ಮನೆಗೆ ಬಂದಿದ್ದ. ಭಾನುವಾರ ಭಾವನ ಜತೆ ಹಸುವಿಗೆ ನೀರು ಕುಡಿಸಲು ಹೋಗಿದ್ದಾರೆ. ಈ ವೇಳೆ ನೀರು ಕುಡಿಯುತ್ತಿದ್ದ ಹಸುವಿನ ಹಗ್ಗ ಹಿಡಿದುಕೊಂಡಿದ್ದ ಪ್ರತೀಕ್‌ನನ್ನು ಹಸು ಎಳೆದಿದೆ. ಈ ವೇಳೆ ಪ್ರತೀಕ್ ನೀರಲ್ಲಿ ಮುಳುಗಿದ್ದಾನೆ. ಕೂಡಲೇ ಭಾವ ಪ್ರಭಾಕರ್ ಈಜು ಬಾರದಿದ್ದರೂ ಪ್ರತೀಕ್‌ನನ್ನು ರಕ್ಷಣೆ ಮಾಡಲು ಮುಂದಾದಾಗ ಅವರೂ ಮುಳುಗಿ ಮೃತಪಟ್ಟಿದ್ದಾರೆ.
ನೀರಲ್ಲಿ ಮುಳುಗಿದ್ದವರನ್ನು ಗಂಡಸಿ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸಹಾಯದಿಂದ ಗ್ರಾಮಸ್ಥರು ಮೇಲೆತ್ತಿ ಆಸ್ಪತ್ರೆಗೆ ಕೊಂಡೊಯ್ದರಾದರೂ ಅಷ್ಟರಲ್ಲಾಗಲೇ ಇಬ್ಬರೂ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದರು. ಈ ಸಂಬಂಧ ಗಂಡಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೋಟೋ 20ಎಂವೈಎಸ್-2
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net