ಮಾರುಕಟ್ಟೆಯ ಫ್ಲಾಟ್‌ಫಾರ್ಮ್ 63ರಲ್ಲಿ ದೊಡ್ಡಮಗ್ಗೆ ಕ್ಲಸ್ಟರ್ ವ್ಯಾಪ್ತಿಯ ಮಗ್ಗೆ, ಅಲ್ಲಾಪಟ್ಟಣ, ಇಟಾಪಟ್ಟಣ, ಹೆಗ್ಗಡಿಹಳ್ಳಿ ಗ್ರಾಮದ ರೈತರು 700 ಬೇಲ್ಗಳನ್ನು ಮಾರಾಟಕ್ಕೆ ತಂದಿದ್ದರು. ಬೆಳಗ್ಗೆ ಹರಾಜು ಪ್ರಕ್ರಿಯೆ ಶುರುವಾಗಿ ವರ್ತಕರು 200 ಬೇಲ್ಗಳ ಬಿಡ್ ನಡೆಸಿದ್ದರು. ಸಾಕಷ್ಟು ಬೇಲ್‌ಗಳನ್ನು ಮನಸ್ಸೋಇಚ್ಛೆ ಕಡಿಮೆ ಬೆಲೆಗೆ ಕೊಳ್ಳಲಾರಂಭಿಸಿದ ವರ್ತಕರು ಮಧ್ಯಮ ಮತ್ತು ಕೆಳ ದರ್ಜೆಯ ಬೇಲ್ಗಳನ್ನು ಬಿಡ್ ಮಾಡದೆ ನಿರ್ಲಕ್ಷಿಸಿದರು. ಇದರಿಂದ ರೊಚ್ಚಿಗೆದ್ದ ರೈತರು, ವರ್ತಕರು ವಿರುದ್ಧ ಘೋಷಣೆ ಕೂಗಿ ದಿಢೀರ್ ಪ್ರತಿಭಟನೆ ನಡೆಸಿದ್ದರಿಂದ ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಲಾಯಿತು.