ಕೇಂದ್ರ, ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸಲಿ

ಬಾಗೂರು ಹೋಬಳಿ ಕೇಂದ್ರದ ಗ್ರಾಮದೇವತೆ ಶ್ರೀ ಸಂತೆಕಾಳೇಶ್ವರಿ ಹಾಗೂ ಶ್ರೀಚಿಕ್ಕಮ್ಮ ದೇವಾಲಯದ ಆವರಣದಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಭುವನಹಳ್ಳಿ ಯೋಗೇಶ್ ಅವರನ್ನು ಶಾಸಕ ಸಿ.ಎನ್.ಬಾಲಕೃಷ್ಣ ಅಭಿನಂದಿಸಿ ದರು. ಶಿವಣ್ಣ, ಮರವನಹಳ್ಳಿ ದೇವರಾಜ್, ಮೂಡನಹಳ್ಳಿ ಚಂದ್ರಣ್ಣ, ಬಸವರಾಜು, ಮೂಡನಹಳ್ಳಿ ಚಂದ್ರಣ್ಣ, ಮನು, ಲಕ್ಷ್ಮಣ್, ಚಂದ್ರೇಗೌಡ, ಕೃಷ್ಣೇಗೌಡ, ಸಂಪತ್ ಇದ್ದರು.
ಬಾಗೂರು ಹೋಬಳಿ ಕೇಂದ್ರದ ಗ್ರಾಮದೇವತೆ ಶ್ರೀ ಸಂತೆಕಾಳೇಶ್ವರಿ ಹಾಗೂ ಶ್ರೀಚಿಕ್ಕಮ್ಮ ದೇವಾಲಯದ ಆವರಣದಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಭುವನಹಳ್ಳಿ ಯೋಗೇಶ್ ಅವರನ್ನು ಶಾಸಕ ಸಿ.ಎನ್.ಬಾಲಕೃಷ್ಣ ಅಭಿನಂದಿಸಿ ದರು. ಶಿವಣ್ಣ, ಮರವನಹಳ್ಳಿ ದೇವರಾಜ್, ಮೂಡನಹಳ್ಳಿ ಚಂದ್ರಣ್ಣ, ಬಸವರಾಜು, ಮೂಡನಹಳ್ಳಿ ಚಂದ್ರಣ್ಣ, ಮನು, ಲಕ್ಷ್ಮಣ್, ಚಂದ್ರೇಗೌಡ, ಕೃಷ್ಣೇಗೌಡ, ಸಂಪತ್ ಇದ್ದರು.
Published on
ಬಾಗೂರು: ಮುಂಗಾರು ಮಳೆ ಬಾರದ ಕಾರಣ ಬೆಳೆ ಕೈಗೆ ಸಿಗದೆ ರೈತರಿಗೆ ಅಪಾರ ನಷ್ಟವುಂಟಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೆರವಿಗೆ ಧಾವಿಸಬೇಕಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಆಗ್ರಹಿಸಿದರು.
ಹೋಬಳಿ ಕೇಂದ್ರದ ಗ್ರಾಮದೇವತೆ ಶ್ರೀಸಂತೆಕಾಳೇಶ್ವರಿ ಹಾಗೂ ಶ್ರೀಚಿಕ್ಕಮ್ಮ ದೇವಾಲಯದ ಆವರಣದಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೋಬಳಿ ಕೇಂದ್ರದ ಶ್ರೀಸಂತೆಕಾಳೇಶ್ವರಿ ದೇವಾಲಯ ಜೀರ್ಣೋದ್ಧಾರ ಸೇರಿದಂತೆ 2 ಕೋಟಿ ರೂ.ವೆಚ್ಚದಲ್ಲಿ ನೂತನ ಆಸ್ಪತ್ರೆ ಕಟ್ಟಡ ನಿರ್ಮಾಣದ ಜತೆಗೆ ಹೋಬಳಿ ಕೇಂದ್ರ ಸಂಪರ್ಕಿಸುವ ಪ್ರಮುಖ 4 ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ಜತೆಗೆ ಪ್ರಸ್ತುತ ಸಾಲಿನಿಂದಲೇ ೆಪಿಎಸ್ ಶಾಲೆ ಪ್ರಾರಂಭಗೊಳಿಸಲಾಗಿದೆ. ಅಭಿವೃದ್ಧಿಯ ದೃಷ್ಟಿಯಿಂದ ಮುಂಬರುವ ದಿನಗಳಲ್ಲಿ ಆಸ್ಪತ್ರೆಗೆ ಆಂಬುಲೆನ್ಸ್ ಸೇವೆ ಸೇರಿದಂತೆ ನೂತನ ಪೊಲೀಸ್ ಠಾಣೆ ನಿರ್ಮಾಣಕ್ಕೂ ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದರು.
ಬಾಗೂರು ಏತ ನೀರಾವರಿ ಯೋಜನೆಯ ಮೂಲಕ ಈ ಭಾಗದ 20ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸುವ ಮೂಲಕ ರೈತರಿಗೆ ನೆರವಾಗಿದ್ದೇವೆ. ಈ ವರ್ಷ ಜೂನ್ ಕಳೆದರೂ ಮಳೆಯಾಗಿಲ್ಲ, ಪ್ರಸ್ತುತ ಶೇ.40ರಷ್ಟು ಮಳೆ ಕೊರತೆ ಉಂಟಾಗಿದ್ದು, ಜುಲೈನಲ್ಲಾದರೂ ಉತ್ತಮ ಮಳೆಯಾಗಿ ಹೇಮಾವತಿ ಜಲಾಶಯ ತುಂಬಲಿ ಎಂದು ದೇವರನ್ನು ಪ್ರಾರ್ಥಿಸಿರುವುದಾಗಿ ತಿಳಿಸಿದರು.
ಸಮಾಜ ಸೇವಕ ಅಣತಿ ಯೋಗೇಶ್ ಮಾತನಾಡಿ, ಶಾಸಕ ಸಿ.ಎನ್.ಬಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ ಈ ಭಾಗದ ದೇವಾಲಯ, ನೀರಾವರಿ ಸೇರಿದಂತೆ ಅನೇಕ ಕೆಲಸಗಳಿಗೆ ವೈಯಕ್ತಿಕವಾಗಿ ಸಹಕಾರ ನೀಡಿದ್ದೇನೆ. ಮುಂಬರುವ ದಿನಗಳಲ್ಲೂ ಅವರ ಜತೆಗೂಡಿ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಲು ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದರು.
ಹುಟ್ಟುಹಬ್ಬದ ಪ್ರಯುಕ್ತ ಶ್ರೀಸಂತೆಕಳೇಶ್ವರಿ ದೇವಾಲಯದಲ್ಲಿ ಶಾಸಕ ಬಾಲಕೃಷ್ಣ ಹಾಗೂ ಸಮಾಜ ಸೇವಕ ಭುವನಹಳ್ಳಿ ಯೋಗೇಶ್ ವಿಶೇಷ ಪೂಜೆ ಸಲ್ಲಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷರಾದ ಬಿ.ಚ್.ಶಿವಣ್ಣ, ಮೂಡನಹಳ್ಳಿ ಚಂದ್ರೇಗೌಡ, ವಿ.ಎನ್.ಮಂಜುನಾಥ್, ಟಿಎಪಿಎಂಎಸ್ ನಿರ್ದೇಶಕ ತೋಟಿ ನಾಗರಾಜ್, ಉದ್ಯಮಿ ಮರವನಹಳ್ಳಿ ದೇವರಾಜ್, ಪುರಸಭಾ ಮಾಜಿ ಅಧ್ಯಕ್ಷ ಕೋಟೆ ಮೋಹನ್, ಮುಖಂಡರಾದ ಮರಿ ದೇವೇಗೌಡ, ರಾಮಚಂದ್ರು, ಶಿವಶಂಕರ ಕುಂಟೆ, ಓಬಳಾಪುರ ಬಸವರಾಜ್, ಅಣ್ಣೇಗೌಡ, ಬಾಗೂರು ಮನು, ನಿವೃತ್ತ ಸೈನಿಕ ಮಧು, ಮೂಡನಹಳ್ಳಿ ಕೃಷ್ಣೇಗೌಡ, ಚಂದ್ರೇಗೌಡ, ಇಂದ್ರೇಶ್, ಮರಗೂರು ಅನಿಲ್‌ಕುಮಾರ್, ಹುಲಿಕೆರೆ ಸಂಪತ್ ಕುಮಾರ್, ಲಕ್ಷ್ಮಣ್, ಮಲ್ಲೇಶ್, ಕಾಳೇಶ್, ಪ್ರಮೋದ್, ಮಹೇಶ್, ದೊಡಗನ್ನಿ ಸತೀಶ್, ಭುವನಳ್ಳಿ ಕೃಷ್ಣಮೂರ್ತಿ ಹಾಗೂ ಗ್ರಾಮಸ್ಥರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net