ಬಾಬೂ ಜಗಜೀವನರಾಮ್ ಬದುಕು, ಆದರ್ಶ ಅನುಕರಣೀಯ

ಆಲೂರು ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಏರ್ಪಡಿಸಲಾಗಿದ್ದ ಡಾ.ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮ ಜರುಗಿತು. ಈ ವೇಳೆ ಸಾಹಿತಿ ಪರಮೇಶ್ ಮಡಬಲು, ಬನ್ನಾರಿ, ಎ.ಟಿ. ಮಂಜುನಾಥ್, ರತ್ನಮ್ಮ ಅವರನ್ನು ಸನ್ಮಾನಿಸಲಾಯಿತು.
ಆಲೂರು ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಏರ್ಪಡಿಸಲಾಗಿದ್ದ ಡಾ.ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮ ಜರುಗಿತು. ಈ ವೇಳೆ ಸಾಹಿತಿ ಪರಮೇಶ್ ಮಡಬಲು, ಬನ್ನಾರಿ, ಎ.ಟಿ. ಮಂಜುನಾಥ್, ರತ್ನಮ್ಮ ಅವರನ್ನು ಸನ್ಮಾನಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • Babu Jagjivan Ram
ಆಲೂರು: ಹಸಿರು ಕ್ರಾಂತಿಯ ಮೂಲಕ ದೇಶದ ಆಹಾರ ಭದ್ರತೆಗೆ ಗಟ್ಟಿ ಅಡಿಪಾಯ ಹಾಕಿದ ಶ್ರೇಯಸ್ಸು ಬಾಬು ಜಗಜೀವನರಾಮ್ ಅವರಿಗೆ ಸಲ್ಲುತ್ತದೆ ಎಂದು ತಹಸೀಲ್ದಾರ್ ಮಲ್ಲಿಕಾರ್ಜುನ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಬಾಬು ಜಗಜೀವನರಾಮ್ ಅವರ 119ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಾಬು ಜಗಜೀವನರಾಮ್ ಸಮ ಸಮಾಜದ ಹರಿಕಾರರಾಗಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ತಲುಪಬೇಕೆಂಬುದು ಅವರ ಮುಖ್ಯ ಧ್ಯೇಯವಾಗಿತ್ತು. ಹಾಗಾಗಿ ಅವರ ಆದರ್ಶಗಳು ಅನುಕರಣೀಯ. ಬಡ ಕುಟುಂಬದಲ್ಲಿ ಜನಿಸಿದರೂ ತಮ್ಮ ಸಾಧನೆಯ ಮುಖೇನ ಜಗತ್ತು ತಮ್ಮತ್ತ ನೋಡುವಂತೆ ಮಾಡಿದರು. ಇದಕ್ಕೆ ಅವರು ಪಡೆದ ಶಿಕ್ಷಣ, ಬದ್ಧತೆ ಕಾರಣ ಎಂದು ತಿಳಿಸಿದರು.
ಸಾಹಿತಿ ಎಂ.ಜಿ. ಪರಮೇಶ್ ಮಡಬಲು ಮಾತನಾಡಿ, ಮಹನೀಯರನ್ನು ನಾವು ಪ್ರತಿನಿತ್ಯ ನೆನೆಪಿಸಿಕೊಳ್ಳಬೇಕು. ಅವರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ಶೋಷಿತರ ಸಮಸ್ಯೆ, ಅನ್ಯಾಯಗಳ ವಿರುದ್ಧ ಹೋರಾಡಿದ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಅವರು ನಮ್ಮ ದೇಶದ ಎರಡು ಕಣ್ಣುಗಳಿದ್ದಂತೆ ಎಂದು ಅಭಿಪ್ರಾಯಪಟ್ಟರು.
ವೇದಿಕೆಯ ಕಾರ್ಯಕ್ರಮಕ್ಕೂ ಮುನ್ನ ಡಾ. ಬಾಬು ಜಗಜೀವನರಾಮ್ ಅವರ ಭಾವಚಿತ್ರವನ್ನು ಪಟ್ಟಣದಲ್ಲಿ ಮೆರವಣಿಗೆ ಮಾಡಲಾಯಿತು. ಬನ್ನಾರಿ ಆಲೂರು, ನಿವೃತ್ತ ಶಿಕ್ಷಕ ಎ.ಟಿ.ಮಂಜುನಾಥ್, ಪಪಂ ಮಾಜಿ ಸದಸ್ಯೆ ರತ್ನಮ್ಮ ಮತ್ತು ವಿದ್ಯಾರ್ಥಿಗಳಾದ ರತನ್, ಹರ್ಷಿಣಿ, ಸಿಂಚನಾ, ದೇವರಾಜು ಅವರನ್ನು ಸನ್ಮಾನಿಸಲಾಯಿತು.
ಮಾದಿಗ ದಂಡೊರ ಸಮಿತಿ ಅಧ್ಯಕ್ಷ ಪುಟ್ಟರಾಜು, ಸಮಾಜದ ಮುಖಂಡರಾದ ಬಸವರಾಜು, ರಂಗಯ್ಯ, ಪುಟ್ಟರಾಜು, ವೆಂಕಟಯ್ಯ, ದೇವರಾಜು, ಅರಸಯ್ಯ, ಬಿರ‌್ಸಿ ನಾಗರಾಜ್, ಪಪಂ ಮುಖ್ಯಾಧಿಕಾರಿ ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೌಸರ್ ಅಹಮದ್, ವೇದಾವತಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net