ತಾಲೂಕು ವ್ಯಾಪ್ತಿಯಲ್ಲಿ ದೌರ್ಜನ್ಯ ಪ್ರಕರಣಗಳು ದಿನೇ ದಿನೆ ವರದಿಯಾಗುತ್ತಿವೆ. ಆದ್ದರಿಂದ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಗ್ರಾಮಗಳಲ್ಲಿ ವಿಚಾರ ಸಂಕಿರಣ ಮತ್ತು ಬೀದಿನಾಟಕಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಾಲೂಕಿನ ಉದ್ದೂರು, ಬಂಡಿ ಶೆಟ್ಟಿಹಳ್ಳಿ, ಕೆರಗೋಡು, ಎಲೆ ಜಾಗಹಳ್ಳಿ, ಹಳ್ಳಿ ಮೈಸೂರು, ದೊಡ್ಡಹಳ್ಳಿ, ಬೆಟ್ಟದ ಸಾತೇನಹಳ್ಳಿ, ಹರಿಹರಪುರ, ಹಳೆಕೋಟೆ ಮತ್ತು ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.