ದೇವಾಲಯದಲ್ಲಿ ಮಾಂಗಲ್ಯ ಸರ, ಗುಂಡುಗಳ ಕಳವು

 ಚೌಡೇಶ್ವರಿ ಅಮ್ಮನವರ ಮಾಂಗಲ್ಯ ಸರವನ್ನು ಕಳ್ಳತನ ಮಾಡಿರುವುದು.
ಚೌಡೇಶ್ವರಿ ಅಮ್ಮನವರ ಮಾಂಗಲ್ಯ ಸರವನ್ನು ಕಳ್ಳತನ ಮಾಡಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಬಾಣಾವರ ಹೋಬಳಿಯ ಏ.ಮಲ್ಲಾಪುರ ಗ್ರಾಮ
  • ಚೌಡೇಶ್ವರಿ ದೇವಾಲಯ
ಅರಸೀಕೆರೆ ಗ್ರಾಮಾಂತರ: ತಾಲೂಕಿನ ಬಾಣಾವರ ಹೋಬಳಿಯ ಏ.ಮಲ್ಲಾಪುರ ಗ್ರಾಮದಲ್ಲಿರುವ ಚೌಡೇಶ್ವರಿ ದೇವಾಲಯದಲ್ಲಿ 9 ಗ್ರಾಂ ತೂಕದ ಮಾಂಗಲ್ಯ ಸರ ಮತ್ತು ಗುಂಡುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.
ದೇವಾಲಯದ ಕಿಟಕಿ ಸರಳನ್ನು ಕಟ್ಟಿಂಗ್ ಮಿಷನ್‌ನಿಂದ ಕಟ್ ಮಾಡಿ ಒಳನುಗ್ಗಿರುವ ಕಳ್ಳರು ಅಮ್ಮನವರ ಕೊರಳಿನಲ್ಲಿದ್ದ 9 ಗ್ರಾಂ ತೂಕದ ಮಾಂಗಲ್ಯ ಸರ ಮತ್ತು ಗುಂಡುಗಳನ್ನು ದೋಚಿದ್ದಾರೆ. ಈ ಸಂಬಂಧ ಬಾಣಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಠಾಣಾಧಿಕಾರಿ ಸುರೇಶ್ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net