ಬಾಳೆಗೊನೆ ಕದಿಯಲು ಯತ್ನ

ಹೋರಿಮಂಗಳಾಪುರ ಗ್ರಾಮದ ರಾಜು ಎಂಬುವರ ತೋಟದಲ್ಲಿ ಕಳ್ಳರು ಬಾಳೆಗೊನೆಗಳನ್ನು ಕಟಾವು ಮಾಡಿರುವುದು.
ಹೋರಿಮಂಗಳಾಪುರ ಗ್ರಾಮದ ರಾಜು ಎಂಬುವರ ತೋಟದಲ್ಲಿ ಕಳ್ಳರು ಬಾಳೆಗೊನೆಗಳನ್ನು ಕಟಾವು ಮಾಡಿರುವುದು.
Published on

ಗಂಡಸಿ:

ಹೋಬಳಿಯ ಹಾಸನ-ತಿಪಟೂರು ರಸ್ತೆಯ ಹೋರಿ ಮಂಗಳಾಪುರ ಗೇಟ್ ಬಳಿಯ ತೋಟದಲ್ಲಿ ಖದೀಮರು ಮಂಗಳವಾರ ರಾತ್ರಿ ಬಾಳೆಗೊನೆಗಳನ್ನು ಕದಿಯಲು ನಡೆಸಿದ ಯತ್ನ ವಿಫಲವಾಗಿದೆ.

ತೋಟದ ಮಾಲಿಕ ಹೋರಿಮಂಗಳಾಪುರ ಗ್ರಾಮದ ರಾಜು ಅವರು ಮಂಗಳವಾರ ರಾತ್ರಿ 10 ಗಂಟೆ ಸಮಯದಲ್ಲಿ ತಮ್ಮ ಬೈಕ್‌ನಲ್ಲಿ ತೋಟದ ಬಳಿಗೆ ಬಂದಿದ್ದರು. ಈ ವೇಳೆ ತೋಟದಲ್ಲಿ ಖದೀಮರು ಬಾಳೆ ಗೊನೆಗಳನ್ನು ಕಡಿಯುತ್ತಿರುವ ಶಬ್ದ ಕೇಳಿ ಹಾಗೂ ಸಮೀಪದಲ್ಲಿ ಹಾಕಿದ್ದ ಬಾಳೆ ಗೊನೆ ರಾಶಿ ಕಂಡು ಕೂಡಲೇ ಸ್ನೇಹಿತರು ಹಾಗೂ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ವಾಹನದಲ್ಲಿ ಬರುವುದನ್ನು ಗಮನಿಸಿದ ಖದೀಮರು ಸ್ಥಳದಿಂದ ಪರಾರಿಯಾಗಿದ್ದಾರೆ. ಸುಮಾರು 200 ಬಾಳೆ ಗೊನೆಗಳು ಹಾಗೂ ಒಂದು ಬೈಕನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದಾರೆ. ಗಂಡಸಿ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net