ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆ ಹಾಕಿಸಿ

ಅರಸೀಕೆರೆ ನಗರದ  ಹಾಸನ ರಸ್ತೆಗೆ ಹೊಂದಿಕೊಂಡಂತಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಂ.ಜಿ.ಸಂತೋಷ್ ಕುಮಾರ್ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕಿದರು. ಡಾ.ರಂಗನಾಥ್, ಖಾನ್, ಸಿಬ್ಬಂದಿ ಇದ್ದರು.
ಅರಸೀಕೆರೆ ನಗರದ ಹಾಸನ ರಸ್ತೆಗೆ ಹೊಂದಿಕೊಂಡಂತಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಂ.ಜಿ.ಸಂತೋಷ್ ಕುಮಾರ್ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕಿದರು. ಡಾ.ರಂಗನಾಥ್, ಖಾನ್, ಸಿಬ್ಬಂದಿ ಇದ್ದರು.
Published on
ಅರಸೀಕೆರೆ: ಆರೋಗ್ಯಪೂರ್ಣ ಸಮಾಜ ನಿರ್ಮಾಣದ ದೃಷ್ಟಿಯಿಂದ ಐದು ವರ್ಷದವರೆಗೂ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆ ಹಾಕಿಸುವಂತೆ ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್ ಪಾಲಕರಿಗೆ ಸಲಹೆ ನೀಡಿದರು.
ತಾಲೂಕು ಆಡಳಿತ ಆರೋಗ್ಯ ಇಲಾಖೆ, ಲಯನ್ಸ್ ಕ್ಲಬ್ ಹಾಗೂ ಅನಂತ ಸದ್ವಿದ್ಯಾ ನರ್ಸಿಂಗ್ ಕಾಲೇಜು ಸೇರಿದಂತೆ ಸಂಘ-ಸಂಸ್ಥೆಗಳ ವತಿಯಿಂದ ಹಾಸನ ರಸ್ತೆಗೆ ಹೊಂದಿಕೊಂಡಂತಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ನೀಡಿ ಮಾತನಾಡಿದರು.
ಭಾರತ ಪೋಲಿಯೋ ಮುಕ್ತ ರಾಷ್ಟ್ರವಾಗಿದೆ. ಅದಕ್ಕೆ ಸಾರ್ವಜನಿಕರ ಸಹಕಾರ ಮರೆಯಲಾಗದು. ಮಕ್ಕಳಲ್ಲಿ ಪಾರ್ಶ್ವವಾಯುವಿಗೆ ಕಾರಣವಾಗುವ ಮಾರಕ ವೈರಸ್ ತಡೆಗಟ್ಟಿ ಅಂಗವೈಕಲ್ಯ ತಪ್ಪಿಸಲು ಕೇವಲ ಎರಡು ಹನಿ ಲಸಿಕೆಯಿಂದ ಸಾಧ್ಯವಿದೆ ಎಂದರು.
ನಗರದಲ್ಲಿ 2900, ಗ್ರಾಮೀಣ ಭಾಗಗಳಲ್ಲಿ 14,671 ಮಕ್ಕಳಿವೆ. ಆರೋಗ್ಯ ಇಲಾಖೆ ವತಿಯಿಂದ 301 ತಂಡ ರಚನೆ ಮಾಡಿದ್ದು ಒಂದು ಬೂತ್‌ಗೆ ಇಬ್ಬರಂತೆ 602 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ನಗರ 20, ಗ್ರಾಮೀಣ 130 ಒಳಗೊಂಡಂತೆ 150 ಬೂತ್‌ಗಳಲ್ಲಿ ಭಾನುವಾರದಿಂದ ಮಂಗಳವಾರದವರೆಗೆ ಲಸಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.
ತಾಲೂಕು ವೈದ್ಯಾಧಿಕಾರಿ ರಂಗನಾಥ್, ಎಂ.ವೈ.ಖಾನ್, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net