ಅರಕಲಗೂಡು ತಾಲೂಕಿನ ಗಂಗೂರು ಗ್ರಾಮದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎ. ಮಂಜು ಬುಧವಾರ ಭೂಮಿಪ್ರಜೆ ನೆರವೇರಿಸಿದರು. ಮುಖಂಡರಾದ ಮಂಜೇಗೌಡ, ಕುಮಾರಸ್ವಾಮಿ, ಲೋಕೇಶ್, ತುಳಸಿರಾಮೇಗೌಡ, ಕುಚಲೇಗೌಡ, ಗಿರೀಶ್, ಗ್ರಾಮಸ್ಥರು ಇದ್ದರು.
Published on:
Copied
Follow Us
ಅರಕಲಗೂಡು:ಪಟ್ಟಣದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ 1 ಕೋಟಿ ರೂ.ವೆಚ್ಚದಲ್ಲಿ ಫುಡ್‌ಕೋರ್ಟ್ ನಿರ್ಮಿಸುವುದಾಗಿ ಶಾಸಕ ಎ.ಮಂಜು ಹೇಳಿದರು.
ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮುಂಭಾಗ ಬುಧವಾರ 6 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಫುಡ್‌ಕೋರ್ಟ್ ಸ್ಥಾಪನೆಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಇದೀಗ ಮುಖ್ಯ ರಸ್ತೆ ಅಭಿವೃದ್ಧಿ ಪಡಿಸಲಾಗುವುದು. ಗುತ್ತಿಗೆದಾರ ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದರು.
ಪಪಂ ಮಾಜಿ ಸದಸ್ಯರಾದ ಕೃಷ್ಣಯ್ಯ, ಎಚ್.ಎಸ್. ರಶ್ಮಿ, ಮಂಜುನಾಥ್ ಇತರರಿದ್ದರು.