ಗುಣಮಟ್ಟದ ಶಿಕ್ಷಣಕ್ಕೆ ಅಂಗನವಾಡಿ ಬುನಾದಿ

ಅರಕಲಗೂಡು ಜೈಭೀಮ್ ನಗರದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಎ. ಮಂಜು ಭೂಮಿಪೂಜೆ ನೆರವೇರಿಸಿದರು. ವೆಂಕಟೇಶ್, ಮಂಜುನಾಥ್, ಚಂದ್ರಣ್ಣ, ಕೃಷ್ಣಯ್ಯ, ರಾಮು ಇತರರಿದ್ದರು.
ಅರಕಲಗೂಡು ಜೈಭೀಮ್ ನಗರದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಎ. ಮಂಜು ಭೂಮಿಪೂಜೆ ನೆರವೇರಿಸಿದರು. ವೆಂಕಟೇಶ್, ಮಂಜುನಾಥ್, ಚಂದ್ರಣ್ಣ, ಕೃಷ್ಣಯ್ಯ, ರಾಮು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • Anganwadi

ಅರಕಲಗೂಡು:

ಗ್ರಾಮೀಣ ಭಾಗದ ಮಕ್ಕಳಿಗೆ ತಳಮಟ್ಟದಿಂದಲೇ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಮತ್ತು ಭದ್ರ ಬುನಾದಿ ದೊರೆಯಲು ಅಂಗನವಾಡಿಗಳಲ್ಲಿ ಕಲಿಕೆ ಮುಖ್ಯ ಎಂದು ಶಾಸಕ ಎ.ಮಂಜು ತಿಳಿಸಿದರು.

ಪಟ್ಟಣದ ಜೈಭೀಮ್ ನಗರದಲ್ಲಿ ಇತ್ತೀಚೆಗೆ 20 ಲಕ್ಷ ರೂ. ವೆಚ್ಚದ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸ ಹಾಗೂ ಸಂಸ್ಕಾರ ಸಿಕ್ಕರೆ ಮಾತ್ರ ಅವರು ಭವಿಷ್ಯದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಯೋಜನೆಯಡಿ ಸುಸಜ್ಜಿತ ಹಾಗೂ ಮಾದರಿ ಅಂಗನವಾಡಿ ಕೇಂದ್ರದ ನಿರ್ಮಾಣ ಕಾರ್ಯಕ್ಕೆ ಕ್ರಮ ಕೈಗೊಳ್ಳಲಾಗಿದೆ. ಬೇರೆ ತಾಲೂಕಿಗೆ ಮಂಜೂರಾಗಿದ್ದ ಈ ವಿಶೇಷ ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿಶೇಷ ಆಸಕ್ತಿಯಿಂದಾಗಿ ಇಲ್ಲಿಗೆ ತರಲಾಗಿದೆ. ಇದು ಕೇವಲ ಒಂದು ಸಾಮಾನ್ಯ ಕಟ್ಟಡವಾಗಿ ಉಳಿಯದೆ, ಇಡೀ ಜಿಲ್ಲೆಗೇ ಅತ್ಯುತ್ತಮ ಮಾದರಿ ಅಂಗನವಾಡಿ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದರು.
ಸಿಡಿಪಿಒ ವೆಂಕಟೇಶ್, ಮುಖಂಡರಾದ ಮಂಜುನಾಥ್, ಕೃಷ್ಣಯ್ಯ, ರಾಮು, ಚಂದ್ರಣ್ಣ, ನರಸೇಗೌಡ, ರಘು, ವರದರಾಜ್, ಸಣ್ಣಯ್ಯ, ಕೀರ್ತಿರಾಜ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net